ಯುವರತ್ನ ಚಿತ್ರದ ಜೊತೆ ಸರ್ಕಾರ ನಡೆದುಕೊಂಡ ರೀತಿ, ದಾರಿ ತಪ್ಪಿಸಿದ ಬಗೆ ಚಿತ್ರರಂಗಕ್ಕೆ ದೊಡ್ಡ ಶಾಕ್‍ನ್ನೇ ನೀಡಿದೆ. ಯುವರತ್ನ ಚಿತ್ರ ಹೊಂಬಾಳೆಯಂತಾ ದೊಡ್ಡ ಬ್ಯಾನರ್ ಸಿನಿಮಾ. ಪುನೀತ್ ಹೀರೋ ಆಗಿದ್ದ ಚಿತ್ರ. ಹೀಗಿದ್ದರೂ ಅವರಿಗೇ ಈ ರೀತಿ ತೊಂದರೆಯಾಗಿರಬೇಕಾದರೆ... ಇಂತಾದ್ದೊಂದು ಪ್ರಶ್ನೆ ಉದ್ಭವಿಸಿದ್ದೇ ತಡ, ಬಹುತೇಕ ಚಿತ್ರಗಳು ಬಿಡುಗಡೆಯನ್ನೇ ಮುಂದಕ್ಕೆ ಹಾಕಿವೆ.
ಕೋವಿಡ್ ನಂತರ ಚಿತ್ರರಂಗದ ಸ್ಟಾರ್ ನಟರ ಚಿತ್ರದ ನಿರ್ಮಾಪಕರೆಲ್ಲ ಒಟ್ಟಿಗೇ ಕೂತು ಪ್ಲಾನ್ ಮಾಡಿಕೊಂಡೇ ಸಿನಿಮಾ ರಿಲೀಸ್ ಮಾಡಿದ್ದರು. ಒಬ್ಬರ ಚಿತ್ರಕ್ಕೆ ಇನ್ನೊಬ್ಬರ ಚಿತ್ರಕ್ಕೆ ತೊಂದರೆಯಾಗಬಾರದು ಎಂದೇ ಯೋಚಿಸಿ ಹೆಜ್ಜೆಯಿಟ್ಟಿದ್ದರು. ಹೀಗಾಗಿಯೇ ಪೊಗರು, ರಾಬರ್ಟ್‍ಗೆ ಯಾವುದೇ ದೊಡ್ಡ ಚಿತ್ರ ಎದುರಾಗಲಿಲ್ಲ. ಆದರೆ,
ಯುವರತ್ನ ಚಿತ್ರಕ್ಕೆ ಸರ್ಕಾರವೇ ದೊಡ್ಡ ತಡೆಗೋಡೆಯಾಗಿಬಿಟ್ಟಿತು.
ಹೀಗಾಗಿ ಮುಂದಿನ ವಾರ ರಿಲೀಸ್ ಆಗೋಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದ ಕೆ.ಪಿ.ಶ್ರೀಕಾಂತ್, ದುನಿಯಾ ವಿಜಯ್ ಕಾಂಬಿನೇಷನ್‍ನ ಸಲಗ ಮುಂದಕ್ಕೆ ಹೋಗಿದೆ. ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3, ಶಿವಣ್ಣ ನಟನೆಯ ಭಜರಂಗಿ 2 ಯಾವಾಗ ರಿಲೀಸ್ ಆಗುತ್ತವೆ ಎಂಬ ಬಗ್ಗೆ ಗ್ಯಾರಂಟಿಯಿಲ್ಲ.