ಯು ಟರ್ನ್. 2016ರಲ್ಲಿ ರಿಲೀಸ್ ಆಗಿದ್ದ ಚಿತ್ರ. ಶ್ರದ್ಧಾ ಶ್ರೀನಾಥ್, ರಾಧಿಕಾ ನಾರಾಯಣ್, ದಿಲೀಪ್ ರಾಜ್ ನಟಿಸಿದ್ದ ಚಿತ್ರದ ನಿರ್ಮಾತೃವಾಗಿದ್ದವರು ಪವನ್ ಕುಮಾರ್. ಕಥೆ, ಚಿತ್ರಕಥೆ, ನಿರ್ದೇಶನ ಮತ್ತು ನಿರ್ಮಾಣ ಎಲ್ಲವನ್ನೂ ಒಬ್ಬರೇ ಮಾಡಿದ್ದರು. ಗೆದ್ದಿದ್ದರು. ಈಗ ಅವರ ಚಿತ್ರ ಇನ್ನೊಂದು ಗೆಲುವಿನ ದಾಖಲೆ ಬರೆದಿದೆ. 8ನೇ ಬಾರಿ ರೀಮೇಕ್ ಆಗುತ್ತಿದೆ.
ತಮಿಳು, ತೆಲುಗು, ಮಲಯಾಳಂ, ಬೆಂಗಾಳಿ ಭಾಷೆಗಳಲ್ಲಿ ಈಗಾಗಲೇ ಯುಟರ್ನ್ ರೀಮೇಕ್ ಆಗಿದೆ. ಅಷ್ಟೇ ಅಲ್ಲ ಶ್ರೀಲಂಕಾದ ಸಿಂಹಳೀಯ, ಫಿಲಿಪಿನೋ ಭಾಷೆಗಳಲ್ಲಿ ರೀಮೇಕ್ ಆಗಿರುವ ಚಿತ್ರ, ಇದೀಗ ಹಿಂದಿ ಚಿತ್ರರಂಗದವರ ಕಣ್ಣಿಗೆ ಬಿದ್ದಿದೆ. ಹೌದು, ಯು ಟರ್ನ್ ಈಗ ಬಾಲಿವುಡ್‍ನಲ್ಲಿ ರೀಮೇಕ್ ಆಗುತ್ತಿದೆ.
--