ಸ್ಟಾರ್ ನಟರ ಚಿತ್ರವನ್ನು ಅಭಿಮಾನಿಗಳು ಹಬ್ಬದಂತೆಯೇ ಸ್ವಾಗತಿಸುತ್ತಾರೆ. ಇನ್ನು ಈಗ ಬರುತ್ತಿರೋದು ಪುನೀತ್ ರಾಜ್‍ಕುಮಾರ್ ಸಿನಿಮಾ. ಪುನೀತ್ ಅವರನ್ನು ಸ್ಟಾರ್ ನಟ, ಡಾ.ರಾಜ್ ಪುತ್ರ, ಶಿವಣ್ಣನ ತಮ್ಮ ಎನ್ನುವುದಕ್ಕಿಂತ ಹೆಚ್ಚಾಗಿ ಅವರನ್ನು ಮನೆಮಗನಂತೆ ಕಾಣುವವರ ಸಂಖ್ಯೆ ಹೆಚ್ಚು. ಹೀಗಾಗಿಯೇ ಈ ಬಾರಿ ಯುವರತ್ನನ ಕ್ರೇಜ್ ಬೇರೆಯೇ ಲೆವೆಲ್‍ನಲ್ಲಿದೆ.
ಚಾಮರಾಜನಗರದಲ್ಲಂತೂ ಥಿಯೇಟರೇ ಕಾಣಿಸದಂತೆ ಥಿಯೇಟರ್‍ನ್ನು ಪೋಸ್ಟರ್, ಕಟೌಟುಗಳಿಂದ ಅಭಿಮಾನಿಗಳು ಮುಚ್ಚಿಬಿಟ್ಟಿದ್ದಾರೆ. ಹಾಸನ, ಬಳ್ಳಾರಿಗಳಲ್ಲೂ ಇದೇ ಪರಿಸ್ಥಿತಿ.
ಕಟೌಟ್‍ಗಳನ್ನು ನಿರ್ಮಾಪಕರೇ ಹಾಕಬೇಕೆಂದೇನೂ ಇಲ್ಲ. ಅಭಿಮಾನಿಗಳೂ ನಿಲ್ಲಿಸಿದ್ದಾರೆ. ಇನ್ನು ಮಲ್ಟಿಪ್ಲೆಕ್ಸುಗಳಲ್ಲಿ ಮಕ್ಕಳು, ಯುವರತ್ನನ ಸ್ಟಾಂಡೀ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ. ದೇವಸ್ಥಾನಗಳಲ್ಲಿ ಯುವರತ್ನ ಚಿತ್ರದ ಯಶಸ್ಸಿಗೆ ಪೂಜೆ, ಪುನಸ್ಕಾರಗಳೂ ನಡೆಯುತ್ತಿವೆ. ಪವರ್ ಆಫ್ ಯೂಥ್.. ಅಷ್ಟೆ..