ಕನ್ನಡದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳಲ್ಲಿ ಮೋಕ್ಷ ಬೇರೆಯದೇ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಒಂದು ಚೆಂದದ ಲವ್ ಸ್ಟೋರಿಯೂ ಇರುವಂತೆ ಕಾಣ್ತಿರೋ ಮೋಕ್ಷ, ತನ್ನ ಟ್ರೇಲರ್‍ನಿಂದಲೇ ಕುತೂಹಲದ ಮೂಟೆಯನ್ನೇ ಪ್ರೇಕ್ಷಕರ ಮುಂದಿಟ್ಟಿದೆ.
ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿರೋ ನಟ ಮೋಹನ್ ಧನರಾಜ್, ಆರಾಧ್ಯ ಲಕ್ಷ್ಮಣ್, ತಾರಕ್ ಪೊನ್ನಪ್ಪ, ಭೂಮಿ ಅಜ್ಞಾನಿ, ನಟನ ಪ್ರಶಾಂತ್ ಮೊದಲಾದವರು ನಟಿಸಿರುವ ಚಿತ್ರ. ಟ್ರೇಲರ್‍ನ ಕೊನೆಗೆ ಹೀರೋನೇ ವಿಲನ್ ಆಗಿರಬಹುದಾ ಎಂಬ ಕುತೂಹಲವನ್ನೂ ಹುಟ್ಟಿಸಿ, ಥ್ರಿಲ್ ಕೊಡ್ತಾರೆ ಡೈರೆಕ್ಟರ್ ಸಮರ್ಥ ನಾಯಕ್. ಎಸ್‍ಜಿಎನ್ ಎಂಟರ್‍ಟೈನ್‍ಮೆಂಟ್‍ನಡಿ ನಿರ್ಮಾಣವಾಗಿರೋ ಚಿತ್ರದ 3 ನಿಮಿಷದ ಟ್ರೇಲರ್‍ಗೆ ಚಿತ್ರರಂಗದ ಗಣ್ಯರು ಶಹಬ್ಬಾಸ್ ಎಂದಿರೋದೇ ವಿಶೇಷ.