ಇಂತಿ ನಿನ್ನ ಪ್ರೀತಿಯ ಮೂಲಕ ಕನ್ನಡಿಗರಿಗೆ ಪರಿಚಯವಾದ ಹುಡುಗಿ ಸೋನುಗೌಡ. ನಂತರ ಬೆಸ್ಟ್ ಆ್ಯಕ್ಟರ್ ಅನ್ನೋ ಸಿನಿಮಾ ಮೂಲಕ ಮಲಯಾಳಂಗೂ ಹೋಗಿ ಬಂದರು. ಮುಮ್ಮಟ್ಟಿಯಂತಾ ಸ್ಟಾರ್ ಜೊತೆಗೂ ನಟಿಸಿದ್ದರು. ನಂತರ ಕನ್ನಡದಲ್ಲೇ ಹೆಚ್ಚು ತೊಡಗಿಸಿಕೊಂಡ ಸೋನುಗೌಡ, ಇತ್ತೀಚೆಗೆ ಯುವರತ್ನ ಚಿತ್ರದಲ್ಲೂ ನಟಿಸಿದ್ದಾರೆ. ಯುವರತ್ನ ರಿಲೀಸ್ ಹೊತ್ತಲ್ಲೇ ಸೋನು ಮತ್ತೆ ಮಲಯಾಳಂನತ್ತ ಹೊರಟು ನಿಂತಿದ್ದಾರೆ.
ಮಲಯಾಳಂನಲ್ಲಿ ಒಳ್ಳೆಯ ಕಥೆಗಳನ್ನು ಕಡಿಮೆ ಬಜೆಟ್‍ನಲ್ಲಿ ಚೆನ್ನಾಗಿ ಹೇಳುತ್ತಾರೆ. ಪಾತ್ರಗಳೂ ಹೊಸ ಅನುಭವ ಕೊಡುತ್ತವೆ. ಈ ಚಿತ್ರದಲ್ಲಿ ನನ್ನದು ಗಾಯಕಿಯ ಪಾತ್ರ. ತಾಯಿ, ಮಗಳು ಮತ್ತು ಬಾಲಕಿಯ ಸುತ್ತಲೂ ನಡೆಯುವ ಕಥೆ ಎಂದಿದ್ದಾರೆ ಸೋನು.