ಕೆ.ಪಿ.ಶ್ರೀಕಾಂತ್ ನಿರ್ಮಾಣದ, ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಟಿಸಿ ನಿರ್ದೇಶಿಸಿರುವ ಸಲಗ ಚಿತ್ರದ ಪ್ರಮೋಷನ್ಗೆ ಹೊಸಪೇಟೆಯಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ಏಪ್ರಿಲ್ 10ರ ಪ್ರೀ-ಇವೆಂಟ್ ಶೋಗೆ ಶ್ರೀಕಾಂತ್ ಮತ್ತು ವಿಜಯ್ ಭರ್ಜರಿ ತಯಾರಿ ನಡೆಸಿದ್ದಾರೆ. ಈ ಶೋದ ಇನ್ನೊಂದು ಅಟ್ರ್ಯಾಕ್ಷನ್ ಸಿದ್ದಿ ಜನಾಂಗದವರ ಹಾಡು.
ಸಲಗ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಸಿದ್ದಿ ಜನಾಂಗದವರು ಹಾಡಿದ್ದಾರೆ. ಅದನ್ನು ಬ್ಯಾಕ್ ಗ್ರೌಂಡ್ ಮ್ಯೂಸಿಕ್ಗೆ ಬಳಸಿಕೊಳ್ಳೋ ಐಡಿಯಾ ಇತ್ತು. ಆದರೆ, ಹಾಡು ಎಷ್ಟು ಅದ್ಭುತವಾಗಿ ಬಂತೆಂದರೆ, ಈಗ ಅದನ್ನೇ ನಮ್ಮ ಪ್ರಮೋಷನ್ಗೆ ಬಳಸಿಕೊಳ್ಳುತ್ತಿದ್ದೇವೆ ಎಂದು ಖುಷಿಯಾಗಿ ಹೇಳಿಕೊಂಡಿದ್ದಾರೆ ದುನಿಯಾ ವಿಜಿ.
ಈಗಾಗಲೇ ಕ್ರಿಕೆಟ್ ಕಪ್ ಆಯೋಜಿಸುವ ಮೂಲಕ ಒಂದು ಹಂತದ ಪ್ರಚಾರ ಶುರು ಮಾಡಿದೆ ಸಲಗ ಟೀಂ. ಚಿತ್ರದುರ್ಗ, ಮಾಲೂರು, ಶಿವಮೊಗ್ಗಗಳಲ್ಲಿ ಟೂರ್ನಿ ಮುಗಿದಿದೆ. ಇನ್ನು ಹುಬ್ಬಳ್ಳಿ, ಮೈಸೂರು ಟೂರ್ನಿ ಬಾಕಿಯಿದೆ. ಅದು ಮುಗಿಯುವ ಹೊತ್ತಿಗೆ ಹೊಸಪೇಟೆ ಬಾಬಾಬಾಬಾ ಸಲಗ ಎಂದು ಕರೆಯುತ್ತಿರುತ್ತದೆ.