` ಯುವರತ್ನ ಬುಕ್ಕಿಂಗ್ ಭಲೇ ಜೋರು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಯುವರತ್ನ ಬುಕ್ಕಿಂಗ್ ಭಲೇ ಜೋರು
Yuvaratna Movie Image

ಯುವರತ್ನ ರಿಲೀಸ್ ಆಗುತ್ತಿರೋದು ಏಪ್ರಿಲ 1ಕ್ಕೆ. ಅಲ್ಲಿಯವರೆಗೂ ಕಾಯೋಕೆ ಸಿದ್ಧವಿರುವ  ಅಭಿಮಾನಿಗಳು, ಆ ದಿನ ಸಿನಿಮಾ ನೋಡೋದನ್ನು ಪಕ್ಕಾ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರುವಾದ ಮರುಕ್ಷಣದಿಂದಲೇ ಟಿಕೆಟ್ ಖರೀದಿ ಜೋರಾಗಿದೆ.

ಬಹುತೇಕ ಮಲ್ಟಿಪ್ಲೆಕ್ಸ್, ಥಿಯೇಟರುಗಳು ಹೌಸ್‍ಫುಲ್. ಆ ದಿನ ಬೆಳಗ್ಗೆ 6 ಗಂಟೆಗೇ ಕೆಲವೆಡೆ ಶೋ ಶುರುವಾಗಲಿದೆ. ನಟಸಾರ್ವಭೌಮ ನಂತರ ಇದೇ ಮೊದಲ ಬಾರಿಗೆ ತೆರೆಗೆ ಬರುತ್ತಿದ್ದಾರೆ ಪುನೀತ್. ರಾಜಕುಮಾರ ನಂತರ ಸಂತೋಷ್-ಪುನೀತ್-ವಿಜಯ್ ಕಿರಗಂದೂರು ಮತ್ತೊಮ್ಮೆ ಜೊತೆಯಾಗಿರುವ ಚಿತ್ರವಿದು.