ಅವಳೊಂದು ಮಾಯೆ, ಅವಳ ಶಕ್ತಿ ಅಗಾಧ. ಅವಳು ಬರ್ತಾಯಿದ್ದಾಳೆ, ಅವಳನ್ನ ತಡೆಯೋರ್ಯಾರು?
ಇಂಥಾದ್ದೊಂದು ಕುತೂಹಲದ ಲೈನ್ ಇಟ್ಟುಕೊಂಡೇ ಎಂಟ್ರಿ ಕೊಟ್ಟಿದೆ ಆನ ಚಿತ್ರದ ಟ್ರೇಲರ್. ಇದು ಕನ್ನಡದ ಮೊಟ್ಟ ಮೊದಲ ವಂಡರ್ ವುಮನ್ ಕಥಾಹಂದರದ ಸಿನಿಮಾ. ಚಿತ್ರದಲ್ಲಿ ಸೂಪರ್ ವುಮನ್ ಆಗಿ ನಟಿಸುತ್ತಿರೋದು ಆದಿತಿ ಪ್ರಭುದೇವ. ಡಾರ್ಕ್ ಹಾರರ್ ಶೈಲಿಯಲ್ಲಿರುವ ಚಿತ್ರದ ಟ್ರೇಲರ್, ಕುತೂಹಲ ಹುಟ್ಟಿಸೋದ್ರಲ್ಲಿ ಕ್ಲಿಕ್ ಆಗಿದೆ.
ಮನೋಜ್ ನಡಲುಮನೆ ನಿರ್ದೇಶನದ ಸಿನಿಮಾದ ಇನ್ನೊಬ್ಬ ನಾಯಕಿ ಪೂಜಾ ವಸಂತ್ ಕುಮಾರ್. ಅವರೇ ಚಿತ್ರದ ನಿರ್ಮಾಪಕಿ. ಆದಿತಿ ಜೊತೆ ಸುನಿಲ್ ಪುರಾಣಿಕ್, ಚೇತನ್ ಗಂಧರ್ವ, ರಣ್ವಿತ್ ಶಿವಕುಮಾರ್, ಪ್ರೇರಣಾ ಕಂಬನ್.. ಹೀಗೆ ಒಳ್ಳೆಯ ಕಲಾವಿದರ ಸಮೂಹವೇ ಇದೆ. ನಿರ್ದೇಶಕರೇ ಚಿತ್ರದ ಕಥೆಗಾರರೂ ಹೌದು.
ಇದುವರೆಗೆ ಸೂಪರ್ ಮ್ಯಾನ್ ಕಲ್ಪನೆಯ ಕೃಷ್, ಶಕ್ತಿಮಾನ್ ಮಾದರಿಯ ಸಿನಿಮಾ, ಧಾರಾವಾಹಿಗಳು ಬಂದಿವೆ. ಆದರೆ, ಭಾರತೀಯ ಚಿತ್ರರಂಗದಲ್ಲೇ ಇದುವರೆಗೆ ಸೂಪರ್ ವುಮನ್ ಮಾಡೆಲ್ ಸಿನಿಮಾ ಬಂದಿರಲೇ ಇಲ್ಲ. ಆ ಕೊರತೆಯನ್ನು ಕನ್ನಡದ ಆನ ನೀಗಿಸುತ್ತಿದೆ.