ಸಿನಿಮಾ ಡಬ್ಬಿಂಗ್ ಮಾಡೋಕೆ ಪ್ರಶಸ್ತ ಕಾಲ ಯಾವುದು..? ಅನುಮಾನವೇ ಇಲ್ಲ. ಅದಕ್ಕೆಲ್ಲ ಮುಂಜಾನೆಯೇ ಬೆಸ್ಟ್ ಟೈಂ. ಅದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದವರು ಡಾ.ರಾಜ್ ಕುಮಾರ್. ಅದರಲ್ಲೂ ಪೌರಾಣಿಕ ಚಿತ್ರಗಳ ಡಬ್ಬಿಂಗ್ನಲ್ಲಿ ಅದನ್ನು ತಪ್ಪಿಸುತ್ತಲೇ ಇರಲಿಲ್ಲ. ಕಾರಣ ಇಷ್ಟೆ, ಸುದೀರ್ಘ ನಿದ್ದೆಯ ನಂತರ ವಾಯ್ಸ್ ಫ್ರೆಶ್ ಅಗಿರುತ್ತೆ. ಅದ್ಭುತ ಬೇಸ್ ವಾಯ್ಸ್ ಸಿಗುವ ಸಮಯ ಅದು. ಈಗ ರಾಕಿಭಾಯ್ ಯಶ್ ಕೂಡಾ ಅದನ್ನೇ ಫಾಲೋ ಮಾಡುತ್ತಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಚಿತ್ರದ ತಮ್ಮ ಪಾತ್ರದ ಡಬ್ಬಿಂಗ್ಗೆ ಯಶ್ ಬರುತ್ತಿರುವುದು ಬೆಳಗ್ಗೆ 6 ಗಂಟೆಗೆ. ನಂತರ 9 ಗಂಟೆಗೆಲ್ಲ ಬ್ರೇಕ್. ಹೀಗೆ ಮಾರ್ನಿಂಗ್ ಶಿಫ್ಟ್ನಲ್ಲಿಯೇ ಕೆಜಿಎಫ್ ಡಬ್ಬಿಂಗ್ ಮಾಡುತ್ತಿದ್ದಾರೆ ಯಶ್. ಯಶ್ ಅವರ ಪ್ರಯತ್ನಕ್ಕೆ ಸಪೋರ್ಟ್ ಮಾಡಿರೋದು ನಿರ್ದೇಶಕ ಪ್ರಶಾಂತ್ ನೀಲ್.
ಹಾಗೆ ನೋಡಿದರೆ ಯಶ್ ಅವರದ್ದು ಬೇಸ್ ವಾಯ್ಸ್. ಅಂತಹುದರಲ್ಲಿ ಯಶ್ ತಮ್ಮ ಧ್ವನಿಯನ್ನು ಇನ್ನಷ್ಟು ಇಂಪ್ರೂವ್ ಮಾಡಿಕೊಂಡಿರೋದು ಕೆಜಿಎಫ್ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.