ಒಬ್ಬರಲ್ಲ.. ಇಬ್ಬರಲ್ಲ.. ಬರೋಬ್ಬರಿ 120ಕ್ಕೂ ಹೆಚ್ಚು ಕಲಾವಿದರು. ಇವರೆಲ್ಲರೂ ಯುವರತ್ನ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅವರೆಲ್ಲರೂ ಸ್ಟೂಡೆಂಟ್ಸ್ ಎನ್ನುವುದು ವಿಶೇಷ. ಈಗಾಗಲೇ ಚಿತ್ರದಲ್ಲಿ 30ಕ್ಕೂ ಹೆಚ್ಚು ಕಲಾವಿದರಿದ್ದಾರೆ.
ಯುವರತ್ನದ ಒಂದು ಸೆಗ್ಮೆಂಟ್ನಲ್ಲಿ ಕಾಲೇಜ್ ಸ್ಟೋರಿ ಇದ್ದು, ಅಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದೆ. ಸಾಮಾನ್ಯವಾಗಿ ಅಂತಹ ಪಾತ್ರಗಳಿಗೆ ಜ್ಯೂ. ಆರ್ಟಿಸ್ಟ್ಗಳನ್ನೇ ಬಳಸಿಕೊಂಡುಬಿಡ್ತಾರೆ. ಆದರೆ, ಯುವರತ್ನ ಚಿತ್ರದಲ್ಲಿ ಅದಕ್ಕಾಗಿಯೇ 2 ಸಾವಿರಕ್ಕೂ ಹೆಚ್ಚು ಪ್ರತಿಭೆಗಳನ್ನು ಹುಡುಕಿ, 120 ಜನರನ್ನು ಆಯ್ಕೆ ಮಾಡಿ ಅವಕಾಶ ನೀಡಲಾಗಿದೆ. ಆ ಎಲ್ಲ 120 ಪ್ರತಿಭೆಗಳಿಗೂ ರಂಗಭೂಮಿ, ಶಾರ್ಟ್ ಫಿಲಂ ಹಿನ್ನೆಲೆಯಿರುವುದು ವಿಶೇಷ.
ಚಿತ್ರಕ್ಕೆ 140 ದಿನ ಶೂಟಿಂಗ್ ಮಾಡಲಾಗಿದ್ದು, ಅದರಲ್ಲಿ ಸುಮಾರು 120 ದಿನ ಈ ಎಲ್ಲ 120 ಹೊಸ ಪ್ರತಿಭಾವಂತರೂ ಸೆಟ್ನಲ್ಲಿದ್ದರಂತೆ. 30ಕ್ಕೂ ಹೆಚ್ಚು ಸೀನಿಯರ್ ಕಲಾವಿದರು, ತಂತ್ರಜ್ಞರ ಜೊತೆ ಇಷ್ಟು ದೊಡ್ಡ ತಂಡವನ್ನೂ ನಿಭಾಯಿಸಿ ಗೆದ್ದಿರುವುದು ವಿಜಯ್ ಕಿರಗಂದೂರು ಮತ್ತು ಸಂತೋಷ್ ಆನಂದರಾಮ್. ಪುನೀತ್ ಅಭಿನಯಿಸಿರೋ ಚಿತ್ರ ಇದೇ ಏಪ್ರಿಲ್ 1ಕ್ಕೆ ರಿಲೀಸ್ ಆಗುತ್ತಿದೆ.