` ಗಣೇಶ್ ಕಣ್ಣಿಗೆ ಏನ್ ಮಾಡಿದ್ರಪ್ಪೋ ಸಿಂಪಲ್ ಸುನಿ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಗಣೇಶ್ ಕಣ್ಣಿಗೆ ಏನ್ ಮಾಡಿದ್ರಪ್ಪೋ ಸಿಂಪಲ್ ಸುನಿ..?
Ganesh Image From Sakkath Movie

ಗೋಲ್ಡನ್ ಸ್ಟಾರ್ ಗಣೇಶ್ ಅವರ ಅತಿ ದೊಡ್ಡ ಆಸ್ತಿ ಅವರ ನಗು ಮತ್ತು ಕಣ್ಣು. ಈಗ ಅವರ ಕಣ್ಣುಗಳಿಗೇ ಕಣ್ಣು ಹಾಕಿಬಿಟ್ರಾ ಸಿಂಪಲ್ ಸುನಿ ಅನ್ನೋ ಅನುಮಾನ ಬಂದಿದೆ. ಕಾರಣ ಇಷ್ಟೆ, ಗಣೇಶ್ ಹಂಚಿಕೊಂಡಿರೋ ಒಂದು ಫೋಟೋ. ಕಟಕಟೆಯಲ್ಲಿ ಅಂಧರು ಹಾಕಿಕೊಳ್ಳುವ ಕಪ್ಪು ಕನ್ನಡಕ ಮತ್ತು ಕುರುಡರು ಬಳಸುವ ವಾಕಿಂಗ್ ಸ್ಟಿಕ್ ಹಿಡಿದಿರೋ ಗಣೇಶ್, ಅದಕ್ಕೆ ಸಖತ್ ಫಿಲ್ಮ್ ಅನ್ನೋ ಹ್ಯಾಷ್ ಟ್ಯಾಗ್ ಕೊಟ್ಟಿದ್ಧಾರೆ.

ನಾಯಕನಾಗಿ 15 ವರ್ಷಗಳಿಂದ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ.. ಮೊದಲ ಬಾರಿಗೆ ನನ್ನ ನೋಟವನು ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ. ಮುಚ್ಚಿಟ್ಟ ಕಣ್ಗಳಿಗೆ. ಬಿಚ್ಚಿಟ್ಟ ಪ್ರೀತಿಯ ಬೆಳಕಚೆಲ್ಲಿ ಹಾರೈಸಿ ಎಂದು ಚೆಂದವಾಗಿ ಬರೆದೂ ಇದ್ಧಾರೆ.ಅದನ್ನು ಸುನಿ ರೀಟ್ವೀಟ್ ಮಾಡಿದ್ದಾರೆ.

ಸಖತ್, ಸಿಂಪಲ್ ಸುನಿ ನಿರ್ದೇಶನದ ಸಿನಿಮಾ. ಈ ಚಿತ್ರಕ್ಕೆ ಇತ್ತೀಚೆಗಷ್ಟೇ ನಿಶ್ವಿಕಾ ನಾಯ್ಡು ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದರು ಸುನಿ. ಈಗ ಅಂತಹ ಚೆಲುವೆಯ ಎದುರು ನಿಲ್ಲೋ ನಾಯಕನ ಕಣ್ಣಿನ ಮೇಲೇ ಸಖತ್ ಆಗಿ ಕಣ್ಣಿಟ್ಟುಬಿಟ್ರಾ..?

ಚಿತ್ರದಲ್ಲಿ ಗಣೇಶ್ ಅಂಧರಾಗಿದ್ದು, ಗಾಯಕನ ಪಾತ್ರ ಮಾಡಿದ್ದಾರೆ. ರಿಯಾಲಿಟಿ ಶೋವೊಂದರಲ್ಲಿ ನಡೆಯುವ ಕಥೆಯೇ ಸಿನಿಮಾ. ಗಣೇಶ್‍ಗೂ ಇಂತಹ ಪಾತ್ರ ಇದೇ ಮೊದಲು.