ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ದಾಖಲೆ ಬರೆದಿದ್ದಾರೆ. ಇದು ವಿಶ್ವದಾಖಲೆ. ಹೊಂಬಾಳೆ ಪ್ರೊಡಕ್ಷನ್ಸ್‍ನ ಪ್ರಶಾಂತ್ ನೀಲ್ ಮ್ಯಾಜಿಕ್ ಇರೋ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಈಗ ವಿಶ್ವ ದಾಖಲೆಯನ್ನೇ ಬರೆದುಬಿಟ್ಟಿದೆ.
ಯೂಟ್ಯೂಬ್‍ನಲ್ಲಿ ಅತೀ ಹೆಚ್ಚು ವೀಕ್ಷಣೆಗೊಳಗಾದ ಟೀಸರ್ ಅನ್ನೋ ಹೆಗ್ಗಳಿಕೆ ಈಗ ಕೆಜಿಎಫ್ 2 ಟೀಸರ್‍ನದ್ದು. ವೀಕ್ಷಿಸಿದವರ ಸಂಖ್ಯೆ 18 ಕೋಟಿ ದಾಟಿದೆ. 175 ಮಿಲಿಯನ್‍ಗೆ ಹೊಂಬಾಳೆ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿ ಸಂಭ್ರಮಿಸಿದೆ.
ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾದಲ್ಲಿ ಯಶ್ ಜೊತೆ ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಮಾಳವಿಕಾ ಅವಿನಾಶ್, ಪ್ರಕಾಶ್ ರೈ ಸೇರಿದಂತೆ ಚಿತ್ರರಂಗದ ಘಟಾನುಘಟಿಗಳೆಲ್ಲ ನಟಿಸಿದ್ದಾರೆ. ಕೆಜಿಎಫ್ ಚಾಪ್ಟರ್ 2 ಜುಲೈನಲ್ಲಿ ರಿಲೀಸ್ ಆಗುತ್ತಿದೆ.