` ಮಾರ್27ಕ್ಕೆ ಸಸ್ಪೆನ್ಸ್ ಥ್ರಿಲ್ಲರ್ "ಮೋಕ್ಷ" ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
 ಮಾರ್27ಕ್ಕೆ ಸಸ್ಪೆನ್ಸ್ ಥ್ರಿಲ್ಲರ್ "ಮೋಕ್ಷ" ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.
Moksha Movie Image

ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆ ಆದರೆ ಎಲ್ಲಾ ಚಿತ್ರಗಳಂತೆ ಈ ಚಿತ್ರದಲ್ಲಿ ಮಾಮೂಲಾದ ಸಸ್ಪೆನ್ಸ್ ಥ್ರಿಲ್ಲರ್ ಮಾಮೂಲಾಗಿ ಇರದೇ, .

ಕನ್ನಡದಲ್ಲಿಯೇ ತೀರ ವಿಭಿನ್ನ ಎನ್ನಬಹುದಾದ ಚಿತ್ರವೊಂದು ತೆರೆಗೆ ಬರಲು ಸಿದ್ದವಿದೆ. ಅದೇ "ಮೋಕ್ಷ".

ಚಿತ್ರ ಬಿಡುಗಡೆಗೂ ಮೊದಲು ಇದೇ 27ರಂದು ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.

ಸಾಕಷ್ಟು ಜಾಹೀರಾತುಗಳನ್ನು ನಿರ್ಮಿಸಿ ಅನುಭವವಿರುವ ಸಮರ್ಥ್ ನಾಯಕ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.ಇವರು ಮಾಡಿದ ಹಲವು ಜಾಹಿರಾತುಗಳು ತಾಂತ್ರಿಕವಾಗಿ ತನ್ನದೇ ಆದ ಶೈಲಿಯನ್ನ ಹೊಂದಿರುತ್ತವೆ.., ಜಾಹಿರಾತು ಕ್ಷೇತ್ರದಲ್ಲಿ ನಿರರ್ಗಳವಾಗಿ ಸಾಗುತ್ತಿದ್ದು, ಹಿರಿತೆರೆಯಲ್ಲಿ ಅವರಿಗೆ ಇದು ಮೊದಲ ಚಿತ್ರ. ಈ ಚಿತ್ರದ ನಿರ್ಮಾಪಕರೂ ಸಮರ್ಥ್ ನಾಯಕ್ ರೇ ಆಗಿದ್ದಾರೆ...

ನೋಡುಗರನ್ನು ಕ್ಷಣಕ್ಷಣಕ್ಕೂ ಗೊಂದಲಗೊಳಿಸುವ, ರೋಚಕ, ಭಯಾನಕ, ನಿಗೂಢ ಕಥೆಯುಳ್ಳ ಸ್ಸಪೆನ್ಸ್ ಸಿನಿಮಾ "ಮೋಕ್ಷ" ಎನ್ನುತ್ತಾರೆ ನಿರ್ದೇಶಕರು.

ಈ ಚಿತ್ರದ ಎಲ್ಲಾ ಪಾತ್ರಗಳಲ್ಲೂ ವಿಶೇಷತೆ ಇದೆ. ವಿಶೇಷವಾಗಿ ಮಾಸ್ಕ್ ಮ್ಯಾನ್ ಎಂಬ ಪಾತ್ರ ಎಲ್ಲರ ಗಮನ ಸೆಳೆಯಲಿದೆ. ಮಾಸ್ಕ್ ಮ್ಯಾನ್ ಕನ್ನಡದ ಕಳೆದ ಸಿನೆಮಾಗಳಲ್ಲಿ ನೋಡಲಾಗದ ವಿಬಿನ್ನ ಪಾತ್ರವೆನ್ನಬಹುದು... ಎನ್ನುತ್ತಾರೆ ನಿರ್ದೇಶಕರು..

ಜಯಂತ್ ಕಾಯ್ಕಿಣಿ, ಕುಮಾರ್ ದತ್ ಅವರು ಬರೆದಿರುವ ಎರಡು ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಕಿಶನ್ ಮೋಹನ್ ಅವರದು.

ಗುರುಪ್ರಶಾಂತ್ ರೈ, ಜೋಮ್ ಜೋಸಫ್, ಕಿರಣ್ ಹಂಪಾಪುರ ಛಾಯಾಗ್ರಹಣ ಹಾಗೂ ವರುಣ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ.

ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ತಾರಕ್ ಪೊನ್ನಪ್ಪ, ಭೂಮಿ ಅಜ್ಞಾನಿ, ಪ್ರಶಾಂತ್ ನಟನ ಮುಂತಾದ ವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery