ಕೆಜಿಎಫ್ 2ನಿಂದ ಹೊರಬಂದಿರೋದು ಇದುವರೆಗೆ ಒಂದೇ ಒಂದು ಟೀಸರ್. ಅದರಲ್ಲೂ ಒಂದು ಡೈಲಾಗ್ ಇಲ್ಲ. ಇರೋದು ಒಂದೆರಡು ಸ್ಲೋಗನ್ ರೀತಿಯ ಬರಹಗಳಷ್ಟೇ.. ಆದರೆ, ಅವೇ ಈಗ ಹಾಲಿವುಡ್ ಲೆವೆಲ್ಲಿನಲ್ಲಿ ಸದ್ದು ಮಾಡುತ್ತಿವೆ. ಚಾಪ್ಟರ್ 2ನ ಒಂದು ಬರಹ ಈಗ ಹಾಲಿವುಡ್ ಪ್ರಮೋಷನ್ನಿಗೆ ಬಳಕೆಯಾಗುತ್ತಿದೆ.
ಹಾಲಿವುಡ್‍ನಲ್ಲಿ ಈಗ ಗಾಡ್ಜಿಲ್ಲ ವರ್ಸಸ್ ಕಿಂಗ್ ಕಾಂಗ್ ಸಿನಿಮಾ ಬರುತ್ತಿರೋದು ಗೊತ್ತಿದೆಯಷ್ಟೆ, ಆ ಚಿತ್ರದ ಅಫಿಷಿಯಲ್ ಪೇಜ್‍ನಲ್ಲಿ ಕೆಜಿಎಫ್ ಚಾಪ್ಟರ್ 2 ಟೀಸರ್‍ನಲ್ಲಿ ಕಾಣಿಸಿಕೊಂಡಿದ್ದ ಎ ಪ್ರಾಮಿಸ್ ವಾಸ್ ಮೇಡ್.. ಅಂಡ್ ಇಟ್ ವಾಸ್ ಕೆಪ್ಟ್.. ಅನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ.
ಒಮ್ಮೆ ಆಣೆ ಮಾಡಿದರೆ ಅಥವಾ ವಚನ ನೀಡಿದರೆ ಅದನ್ನು ಉಳಿಸಿಕೊಳ್ಳುತ್ತೇವೆ ಅನ್ನೋದು ಇದರ ಅರ್ಥ. ಅನುಮಾನವೇನೂ ಇಲ್ಲ. ಪ್ರಶಾಂತ್ ನೀಲ್ ಪ್ರಾಮಿಸ್‍ನ್ನು ಉಳಿಸಿಕೊಳ್ತಾರೆ ಅಂತಾ ನಾವು ನಂಬಬಹುದು.