Print 
darshan, umapathy, tharun sudhir, roberrt,

User Rating: 5 / 5

Star activeStar activeStar activeStar activeStar active
 
ಇದೂ ರೆಕಾರ್ಡು..!!!
Roberrt Movie Image

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಸತತ 5ನೇ ದಿನವೂ ಭರ್ಜರಿ  ಪ್ರದರ್ಶನ ಕಂಟಿನ್ಯೂ ಮಾಡಿದೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಗುರುವಾರ ಚಿತ್ರ ಬಿಡುಗಡೆ ಆಗಿದ್ದು, ಈಗಾಗಲೇ ಚಿತ್ರದ ಕಲೆಕ್ಷನ್ 60 ಕೋಟಿ ದಾಟಿದೆ ಅನ್ನೋ ಸುದ್ದಿ ಬಂದಿದೆ.

ಕೇವಲ 4 ದಿನಕ್ಕೆ 50 ಕೋಟಿ ಕ್ಲಬ್ ಸೇರಿದ್ದು ರಾಬರ್ಟ್ ಸಾಧನೆ. 'ರಾಬರ್ಟ್' ಬಿಡುಗಡೆಯಾದ ಮೊದಲ ದಿನ  17.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಸಿನಿಮಾ 2ನೇ ದಿನ 12.78 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 3ನೇ ದಿನಕ್ಕೆ ಶನಿವಾರ 14.10 ಕೋಟಿ ರೂಪಾಯಿ ಕಲೆಕ್ಷನ್ ಆದ್ರೆ, 4ನೇ ದಿನ ಭಾನುವಾರ

-15.68 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 5ನೇ ದಿನದ ಲೆಕ್ಕ ಇನ್ನೂ ಸಿಗಬೇಕಿದೆ.