` ಪಂಚಾಕ್ಷರಿ ಗವಾಯಿಗಳ ಗುರುಗಳ ಕಥೆಯ ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪಂಚಾಕ್ಷರಿ ಗವಾಯಿಗಳ ಗುರುಗಳ ಕಥೆಯ ಸಿನಿಮಾ
ಪಂಚಾಕ್ಷರಿ ಗವಾಯಿಗಳ ಗುರುಗಳ ಕಥೆಯ ಸಿನಿಮಾ

ಗಾನಯೋಗಿ ಪಂಚಾಕ್ಷರಿ ಗವಾಯಿಗಳದ್ದು ಸಂಗೀತ ಲೋಕದಲ್ಲಿ ಬಹು ದೊಡ್ಡ ಹೆಸರು. ಅವರ ಗುರುಗಳು ಹಾನಗಲ್ ಕುಮಾರಸ್ವಾಮಿ. ಅವರ ಕಥೆಯೀಗ ಸಿನಿಮಾ ಆಗುತ್ತಿದೆ. ಪಂಚಾಕ್ಷರ ಗವಾಯಿಗಳ ಸಿನಿಮಾ ಮಾಡಿದ್ದ ಬಂಗಾರೇಶ್ ಅವರೇ ಈ ಚಿತ್ರಕ್ಕೂ ನಿರ್ಮಾಪಕರು.

ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗ ಸ್ವಾಮಿಗಳು ಈ ಚಿತ್ರ ಮಾಡಲು ಬಂಗಾರೇಶ್ ಅವರಿಗೆ ತಿಳಿಸಿದರಂತೆ. ಕುಮಾರಸ್ವಾಮಿಗಳ ಸಿನಿಮಾ ಮಾಡುವ ಯೋಗ ನನಗೇ ಸಿಕ್ಕಿದ್ದು ನನ್ನ ಪುಣ್ಯ ಎಂದಿದ್ದಾರೆ ಬಂಗಾರೇಶ್. ಕುಮಾರಸ್ವಾಮಿಯವರನ್ನು ಆರಾಧಿಸುವ ಮಠಾಧೀಶರ ಒಪ್ಪಿಗೆಯನ್ನೂ ಈಗಾಗಲೇ ಪಡೆದಿರುವ ಬಂಗಾರೇಶ್, ಚಿತ್ರದ ಸಂಗೀತವನ್ನು ಹಂಸಲೇಖ ಅವರಿಗೇ ವಹಿಸಿದ್ದಾರೆ.