ರಾಬರ್ಟ್ ಸಿನಿಮಾ ರಿಲೀಸ್ ಆಗುತ್ತಿರೋ ಹೊತ್ತಿನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಚಿತ್ರದ ಹಿಟ್ಸ್, ವ್ಯೂವ್ಸ್, ಡಬ್ಬಿಂಗ್ ರೈಟ್ಸ್, ಮಾರ್ಕೆಟ್ ಎಲ್ಲದರಲ್ಲೂ ದಾಖಲೆ ಬರೆದ ರಾಬರ್ಟ್ ಚಿತ್ರವೀಗ ಕಟೌಟ್ಗಳಲ್ಲೂ ದಾಖಲೆ ಬರೆದಾಗಿದೆ.
ಎಂಜಿ ರಸ್ತೆಯ ಥಿಯೇಟರೊಂದರಲ್ಲಿ ಕಟೌಟ್ ಹಾಕುತ್ತಿರೋದು ಮೊದಲ ದಾಖಲೆಯಾದರೆ, ಈಗ ಇನ್ನೊಂದು ಚಿತ್ರಮಂದಿರದ ಎದುರು 13 ಕಟೌಟ್ ಎದ್ದು ನಿಂತಿವೆ. ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ ಟಾಕೀಸಿನಲ್ಲಿ ದರ್ಶನ್ ಅವರ 13 ಕಟೌಟ್ ಹಾಕಲಾಗಿದೆ. ಈ ಮೊದಲು ಇದೇ ಥಿಯೇಟರಿನಲ್ಲಿ ದೊಡ್ಮನೆ ಹುಡ್ಗ ಚಿತ್ರಕ್ಕೆ ಪುನೀತ್ ಅವರ 10 ಕಟೌಟ್ ಹಾಕಿದ್ದು ದಾಖಲೆಯಾಗಿತ್ತು. ಈಗ ಆ ದಾಖಲೆಯನ್ನು ಮುರಿದು ಮುನ್ನುಗ್ಗಿದೆ ರಾಬರ್ಟ್. ಅಂದಹಾಗೆ ಇಷ್ಟೂ ಕಟೌಟ್ ಹಾಕಿರೋದು ದರ್ಶನ್ ಫ್ಯಾನ್ಸ್.