ದರ್ಶನ್ ಶೂಟಿಂಗ್ನಲ್ಲಿರುವಾಗ ನಿರ್ಮಾಪಕರ ಪೈಸೆ ಪೈಸೆಯನ್ನೂ ಲೆಕ್ಕ ಹಾಕ್ತಾರೆ. ಅದನ್ನವರು ಹಲವೆಡೆ ಹೇಳಿಕೊಂಡೂ ಇದ್ದಾರೆ. ರಾಬರ್ಟ್ ಶೂಟಿಂಗ್ನಲ್ಲೂ ಹಾಗೆಯೇ ಆಗಿತ್ತಂತೆ.
ರಾಬರ್ಟ್ ಚಿತ್ರಕ್ಕೆ ಕ್ಯಾಮೆರಾಮನ್ ಆಗಿರೋದು ಸುಧಾಕರ್. ತರುಣ್ ಸುಧೀರ್ ಇಷ್ಟದ ಕ್ಯಾಮೆರಾಮನ್. ಆದರೆ ರಾಬರ್ಟ್ ಶುರುವಾದ ಮೊದಲ ಕೆಲವು ದಿನ ದರ್ಶನ್ ಇವರ ಬಗ್ಗೆ ತುಂಬಾ ಇರಿಟೇಟ್ ಮಾಡಿಕೊಂಡಿದ್ದರಂತೆ.
ಒಂದೊಂದು ಫ್ರೇಮ್ ಇಡೋಕೂ ತುಂಬಾ ಟೈಮ್ ತೆಗೆದುಕೊಳ್ತಾ ಇದ್ರು. ನನಗೇ ಬೇಜಾರು ಬಂದು ನೀನು ತುಂಬಾ ಕಾಯಿಸ್ತಾ ಇದ್ದೀಯ ಎಂದು ಡೈರೆಕ್ಟ್ ಆಗಿಯೇ ಹೇಳಿದ್ದೆ. ಆದರೆ, ಆತನ ಫ್ರೇಮ್ ನೋಡಿ ಇಷ್ಟವಾಗಿಬಿಡ್ತು. ಅದಾದ ಮೇಲೆ ಸುಧಾಕರ್ಗೆ ನಿನಗೆ ಎಷ್ಟು ಟೈಂ ಬೇಕಾದರೂ ತಗೋ, ಡೋಂಟ್ ವರಿ ಎಂದಿದ್ದೆ. ಸುಧಾಕರ್ ಈ ಚಿತ್ರದ ಇನ್ನೊಬ್ಬ ಹೀರೋ ಎಂಬರ್ಥದಲ್ಲಿ ಮಾತನಾಡಿದ್ದಾರೆ ದರ್ಶನ್.
ರಾಬರ್ಟ್ ಚಿತ್ರದ ಟ್ರೇಲರುಗಳಲ್ಲಿ ಇದು ಎದ್ದು ಕಾಣಿಸ್ತಿದೆ. ವಿಷ್ಯುವಲ್ ಕ್ವಾಲಿಟಿಯೂ ಸಖತ್ತಾಗಿದೆ. ಮೇಕಿಂಗ್ನಲ್ಲಿ ತರುಣ್ ಸುಧೀರ್ ರಾಜಿಯಾಗಿಲ್ಲ. ಅದ್ಧೂರಿತನದಲ್ಲಿ ಉಮಾಪತಿ ಕಡಿಮೆ ಮಾಡಿಲ್ಲ. ಇಷ್ಟೆಲ್ಲ ಶ್ರಮ ಹಾಕಿರೋ ಸಿನಿಮಾ ರಾಬರ್ಟ್ ಇದೇ ಶಿವರಾತ್ರಿಯಂದು ತೆರೆಗೆ ಬರುತ್ತಿದೆ.