ಕನ್ನಡದಲ್ಲಿ ಬಾಂಬೆ ಹುಡುಗಿಯರ ಸಾಮ್ರಾಜ್ಯವೇ ಜೋರಾಗಿದ್ದಾಗ, ಅವರು ಎಕ್ಸ್ಪೋಸ್ ಮಾಡ್ತಾರೆ ಕಣ್ರಿ, ನಮ್ಮವ್ರು ಮಡಿ ಮಡಿ ಅಂತಾರೆ ಅನ್ನೋ ಮಾತನ್ನು ನಿರ್ಮಾಪಕರೇ ಹೇಳುತ್ತಿದ್ದಾಗ ಕಥೆಗೆ ದೃಶ್ಯಕ್ಕೆ ಅಗತ್ಯ ಬಿದ್ದರೆ ಬಟ್ಟೆ ಬಿಚ್ಚೋಕೆ ನಾನ್ ರೆಡಿ. ಬಟ್ಟೆ ಬಿಚ್ಚೋಕೆ ನಾನೇಕೆ ಅಂಜಲಿ..? ' ಎನ್ನೋ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ನಟಿ ಅಂಜಲಿ.
ಕಾಶಿನಾಥ್ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿದ ಅಂಜಲಿ ಅನಂತನ ಅವಾಂತರ, ತರ್ಲೆ ನನ್ ಮಗ, ನೀನು ನಕ್ಕರೆ ಹಾಲು ಸಕ್ಕರೆ ಸೇರಿದಂತೆ ಹಲವು ಚಿತ್ರಗಳಲ್ಲಿ ಮಿಂಚು ಹರಿಸಿದ್ದ ಚೆಲುವೆ. ಅದಾದ ಮೇಲೆ ತೆರೆಮರೆಗೆ ಸರಿದು ಹೋಗಿದ್ದ ಅಂಜಲಿ ಈಗ 2 ದಶಕಗಳ ನಂತರ ಮತ್ತೆ ಬಣ್ಣ ಹಚ್ಚಿದ್ದಾರೆ.
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರೋ ನೇತ್ರಾವತಿ ಅನ್ನೋ ಧಾರಾವಾಹಿಯಲ್ಲಿ ತಾಯಿಯ ಪಾತ್ರ ಮಾಡುತ್ತಿದ್ದಾರೆ ಅಂಜಲಿ.