ಕೋಟಿಗೊಬ್ಬ 3 ಚಿತ್ರ ರಿಲೀಸ್ ಆಗೋಕೆ ರೆಡಿಯಾಗಿದೆ. ಮೊದಲಿಗೆ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬರುತ್ತೋ.. ಕೋಟಿಗೊಬ್ಬ 3 ಬರುತ್ತೋ.. ಗ್ಯಾರಂಟಿಯಿಲ್ಲ. ಈ ನಡುವೆಯೇ ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3 ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ.
ಕೋಟಿಗೊಬ್ಬ3 ಸಿನಿಮಾ ಚಿತ್ರೀಕರಣ ಕಂಪ್ಲಿಟ್ ಆಗಿದ್ದು ಸಿನಿಮಾ ಬಿಡುಗಡೆಗೆ ಸಿದ್ದತೆ ಮಾಡಿಕೊಳ್ತಿದ್ದಾರೆ...ಈ ಮಧ್ಯೆ ಚಿತ್ರದ ಕಲರ್ ಫುಲ್ ಆಗಿರೋ ಮೇಕಿಂಗ್ ರಿಲಿಸ್ ಮಅಡಿ ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹುಟ್ಟುಹಾಕಿದೆ ಕೊಟಿಗೊಬ್ಬ3 ತಂಡ. ಕಿಚ್ಚನ ಜೊತೆ ನಾಯಕಿಯಾಗಿ ಮಲೆಯಾಳಂ ನಟಿ ಮಡೋನಾ ಕಾಣಿಸಿಕೊಂಡಿದ್ದಾರೆ. ಸದ್ಯ ಬಿಡುಗಡೆ ಆಗಿರೋ ಮೇಕಿಂಗ್ ನೋಡ್ತಿದ್ರೆ ಕೋಟಿಗೊಬ್ಬ ದೊಡ್ಡ ಬಜೆಟ್ಟಿನ ಸಿನಿಮಾ ಅನ್ನೋದ್ರಲ್ಲಿ ನೋ ಡೌಟ್. ಕಿಚ್ಚನ ಜೊತೆ ಮಡೋನ್ನಾ , ಆಶಿಕಾ ರಂಗನಾಥ್, ಶ್ರದ್ದಾ ದಾಸ್, ರವಿಶಂಕರ್ , ತಬಲಾನಾಣಿ , ಶಿವರಾಜ್ ಕೆ ಆರ್ ಪೇಟೆ, ಶೋಭ್ ರಾಜ್ ಹೀಗೆ ದೊಡ್ಡ ದೊಡ್ಡ ನಟರ ದಂಡೇ ಇದೆ. ನಿರ್ದೇಶಕ ಶಿವಕಾರ್ತಿಕ್. ಸೈಬೀರಿಯಾ, ಮಲೇಷಿಯಾ, ಥೈಲ್ಯಾಂಡ್ ನ ಸುಂದರ ತಾಣಗಳಲ್ಲಿ ಸಿನಿಮಾವನ್ನ ಚಿತ್ರೀಕರಿಸಿದ್ದು, ಇದು ಮೈಂಡ್ ಗೇಮ್ನ ಸಿನಿಮಾ ಎನ್ನಲಾಗಿದೆ.