ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಚಿತ್ರದ ಪ್ರಮೋಷನ್ ಸದ್ದಿಲ್ಲದೆ ದೊಡ್ಡ ಮಟ್ಟದಲ್ಲೇ ಶುರುವಾಗಿದೆ. ಈ ಹಾದಿಯಲ್ಲಿ ಯುವರತ್ನ ಟೀಂ ಇಟ್ಟಿರೋ ಹೆಜ್ಜೆ ಗುರು ಚಾಲೆಂಜ್. ಈ ಹಾದಿಯಲ್ಲಿ ಪುನೀತ್ ತಮ್ಮ ಟೀಚರ್ ವಿಜಯಲಕ್ಷ್ಮಿ ನನ್ನ ಗುರು ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಧ್ರುವ ಸರ್ಜಾ, ನನ್ನ ಅಣ್ಣ ಚಿರಂಜೀವಿ ಸರ್ಜಾ ನನ್ನ ಗುರು ಎಂದು ಟ್ವೀಟ್ ಮಾಡಿದ್ದಾರೆ.
ಇದು ವೈರಲ್ ಆಗೋಕೆ ಶುರುವಾದಂತೆಯೇ ಅಭಿಮಾನಿಗಳೂ ಜೋರಾಗಿದ್ದಾರೆ. ಅವರು ತಮ್ಮ ತಮ್ಮ ಗುರುವಿನ ಜೊತೆ ಇರೋ ಫೋಟೋಗಳನ್ನು ಅಪ್ಲೋಡ್ ಮಾಡಿ, ಅವರ ಹೆಸರು ಹಾಕಿ, ಅದನ್ನು ಮುಂದಿನವರಿಗೆ ಪಾಸ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಯುವರತ್ನ ಚಿತ್ರದ ಬಿಡುಗಡೆಗೆ #MyGuru ಚಾಲೆಂಜ್ ವೇದಿಕೆ ಸಿದ್ಧಪಡಿಸುತ್ತಿದೆ.
ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಪುನೀತ್ ಅವರಿಗೆ ಇದು 2ನೇ ಸಿನಿಮಾ. ರಾಜಕುಮಾರ ನಂತರ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು, ಸಂತೋಷ್ ಆನಂದರಾಮ್ ಮತ್ತು ಪುನೀತ್ ಮತ್ತೆ ಒಟ್ಟಿಗೇ ನಟಿಸುತ್ತಿರುವ ಸಿನಿಮಾ ಇದು. ಹೀಗಾಗಿ ಸೆನ್ಸೇಷನ್ ಜೋರಾಗಿದೆ.