ಕನ್ನಡವನ್ನ ನಾವೆಲ್ಲರೂ ಸೇರಿ ಉಳಿಸಬೇಕು ಅಂತಾ ದಯವಿಟ್ಟು ಹೇಳಬೇಡಿ. ಕನ್ನಡವನ್ನು ಬೆಳೆಸೋಣ ಅನ್ನಿ. ಕನ್ನಡವನ್ನು ಉಳಿಸೋಣ ಎನ್ನುವುದೇ ನಮ್ಮ ಮೊದಲ ಸೋಲು. ಹೀಗೆಂದು ಹೇಳಿದ್ದಾರೆ ಕಿಚ್ಚ ಸುದೀಪ್.
ಕಿಚ್ಚ ಸುದೀಪ್ ಇತ್ತೀಚೆಗೆ ಭುರ್ಜ್ ಖಲೀಫಾದಲ್ಲಿ ಕನ್ನಡ ಬಾವುಟವನ್ನು ಹಾರಿಸಿ ಸುದ್ದಿ ಮಾಡಿದ್ದರು. ಸುದೀಪ್ ಅವರ ಚಿತ್ರರಂಗದ ಜರ್ನಿಯ 25ನೇ ವರ್ಷವನ್ನು ದುಬೈನಲ್ಲಿ ಆಚರಣೆ ಮಾಡಲಾಗಿತ್ತು. ಆಗ ಭುರ್ಜ್ ಖಲೀಫಾದಲ್ಲಿ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರದ ಲೋಗೋ ಬಿಡುಗಡೆಗೂ ಮುನ್ನ ಕನ್ನಡ ಬಾವುಟ ಪ್ರದರ್ಶನ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಸುದೀಪ್ ಅವರನ್ನು ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಹಲವು ಕನ್ನಡಪರ ಸಂಘಟನೆಗಳು ಸನ್ಮಾನಿಸಿದವು. ಕನ್ನಡ ಸಂಘಟನೆಗಳ ಸನ್ಮಾನ ಸ್ವೀಕರಿಸಿದ ವೇಳೆ ಕಿಚ್ಚ ಈ ಮಾತು ಹೇಳಿದ್ದಾರೆ.
ಬೇರೆ ಭಾಷೆಯವರು ಕನ್ನಡ ಮಾತನಾಡುವಾಗ ಅವರಿಗೆ ಸಪೋರ್ಟ್ ಮಾಡೋಣ. ಕನ್ನಡವನ್ನ ನಮ್ಮಿಂದ ಯಾರೂ ಕಿತ್ಕೊಳ್ಳೋಕೆ ಆಗಲ್ಲ. ಕನ್ನಡವನ್ನ ಉಳಿಸೋಣ ಎನ್ನಬೇಡಿ. ಅದೇ ನಮ್ಮ ಮೊದಲ ಸೋಲು. ಕನ್ನಡವನ್ನ ಬೆಳೆಸೋಣ ಎನ್ನೋಣ ಎಂದಿದ್ದಾರೆ ಸುದೀಪ್.