ಸದ್ಯಕ್ಕೆ ಯುವರತ್ನ ಚಿತ್ರದ ಪ್ರಮೋಷನ್ನಿನಲ್ಲಿ ಬ್ಯುಸಿಯಾಗಿರೋ ಪುನೀತ್ ಮುಂದಿನ ಸಿನಿಮಾ ಯಾವುದು ಅನ್ನೋ ಪ್ರಶ್ನೆಗೆ ಕಚ್ಚಾ ಸ್ವರೂಪ ಸಿಗುತ್ತಿದೆ. ಯುವರತ್ನ ಪ್ರಮೋಷನ್ ಮುಗಿಯುತ್ತಿದ್ದಂತೆ ಜೇಮ್ಸ್ನಲ್ಲಿ ಮತ್ತೆ ಬ್ಯುಸಿಯಾಗಲಿರೋ ಪುನೀತ್, ಅದಾದ ನಂತರ ಪೈಲ್ವಾನ್ ಕೃಷ್ಣ ಜೊತೆ ಸಿನಿಮಾ ಒಪ್ಪಿಕೊಂಡಿದ್ದಾರೆ.
ಮಾರ್ಚ್ 17ರಂದು ಪುನೀತ್ ಹೊಸ ಚಿತ್ರ ಘೋಷಣೆಯಾಗುತ್ತಿದೆ. ಚಿತ್ರದಲ್ಲಿ RAW ಏಜೆಂಟ್ ಪಾತ್ರದಲ್ಲಿ ಪುನೀತ್ ನಟಿಸಲಿದ್ದಾರಂತೆ. ಲವರ್ ಬಾಯ್, ಗೃಹಸ್ಥ, ಪೊಲೀಸ್, ಉದ್ಯಮಿ.. ಹೀಗೆ ನಾನಾ ಪಾತ್ರಗಳಲ್ಲಿ ನಟಿಸಿರುವ ಪುನೀತ್ ಇದೇ ಮೊದಲ ಬಾರಿಗೆ ರಾ ಏಜೆಂಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.