` ಚಾಲೆಂಜಿಂಗ್ ಸ್ಟಾರ್’ಗೆ ಸೆಲಬ್ರಿಟಿ ಕೊಟ್ಟ ಗಿಫ್ಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಚಾಲೆಂಜಿಂಗ್ ಸ್ಟಾರ್’ಗೆ ಸೆಲಬ್ರಿಟಿ ಕೊಟ್ಟ ಗಿಫ್ಟ್
Darshan

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಷ್ಟ ಎಂದು ಹೇಳಿಕೊಂಡು ಬಂದವರಿಗೆ ತಮ್ಮ ಕೈಲಾದಷ್ಟು ನೆರವು ನೀಡುತ್ತಾರೆ ಅನ್ನೋದು ಅಭಿಮಾನಿಗಳಿಗೆ ಗೊತ್ತು. ಇತ್ತೀಚೆಗೆ ದರ್ಶನ್ ಅವರನ್ನು ಭೇಟಿಯಾಗಿದ್ದ ಅಂಗವಿಕಲ ಅಭಿಮಾನಿಯೊಬ್ಬರು, ಅಣ್ಣಾ, ಏನಾದ್ರೂ ಹೆಲ್ಪ್ ಬೇಕಿದ್ರೆ ಕೇಳಿ ಅಣ್ಣಾ ಎಂದು ದರ್ಶನ್ ಅವರಿಗೆ ಅಭಿಮಾನದ ವಿರಾಟ್ ದರ್ಶನ್ ಮಾಡಿಸಿದ್ದ ಕಥೆಯನ್ನೂ ದರ್ಶನ್ ಖುಷಿಯಾಗಿ ಹೇಳಿಕೊಂಡಿದ್ದರು. ಈಗ ಇಲ್ಲೊಬ್ಬ ಅಭಿಮಾನಿ ದರ್ಶನ್ ಅವರಿಗೆ ಟಗರೊಂದು ಕಾಣಿಕೆಯಾಗಿ ನೀಡಿದ್ದಾರೆ.

ಗದಗ ತಾಲೂಕಿನ ಕಣವಿ ಹೊಸೂರಿನ ಯುವಕ ಶಂಭು ಗಡಗಿ ಟಗರು ಉಡುಗೊರೆ ನೀಡಿದ ಅಭಿಮಾನಿ.  ಹುಬ್ಬಳ್ಳಿಯಲ್ಲಿ ರಾಬರ್ಟ್ ಸಿನಿಮಾದ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗುವಾಗ ಭೇಟಿಯಾದ ಅಭಿಮಾನಿ, ದರ್ಶನ್ ಅವರಿಗೆ ತಾನೇ ಸಾಕಿ ಬೆಳೆಸಿದ್ದ ಟಗರನ್ನು ಉಡುಗೊರೆಯಾಗಿ ನೀಡಿದ್ದಾನೆ.

ಶಂಭು ಗಡಗಿ ಶ್ರೀಮಂತನೇನಲ್ಲ. ಗದಗ್ನಲ್ಲಿ ಮೊಬೈಲ್ ಶಾಪ್ನಲ್ಲಿ ಕೆಲಸ ಮಾಡುವ ಹುಡುಗ. ದರ್ಶನ್ ಅವರ ಭೇಟಿಗೆ ಕಾಯುತ್ತಿದ್ದ ಶಂಭು, ತಾನು ಎರಡೂವರೆ ವರ್ಷ ಪ್ರೀತಿಯಿಂದ ಸಾಕಿದ್ದ ಟಗರನ್ನು ದರ್ಶನ್ ಕೊಟ್ಟು ಅಭಿಮಾನ ಮೆರೆದಿದ್ದಾನೆ. ಹಾಗಂತ, ಆ ಟಗರು ಈಗ ದರ್ಶನ್ ಫಾರ್ಮ್ ಹೌಸ್ ಸೇರಿದೆ ಎಂದುಕೊಳ್ಳಬೇಡಿ. ಅಭಿಮಾನಿಯ ಮನೆಯಲ್ಲೇ ಅದನ್ನು ಬಿಟ್ಟಿರುವ ದರ್ಶನ್, ತಮ್ಮ ಫಾರ್ಮ್ ಹೌಸ್ಗೆ ಬರೋಕೆ ಆಹ್ವಾನ ನೀಡಿದ್ದಾರೆ. ವಾಹನ ಕಳಿಸಿಕೊಡ್ತೇನೆ, ಆಗ ಟಗರನ್ನೂ ತನ್ನಿ ಎಂದಿದ್ದಾರೆ. ಅಭಿಮಾನಿಯ ಎದುರು ಆತನ ಪ್ರೀತಿಗೆ ಅಭಿಮಾನಕ್ಕೆ ದರ್ಶನ್ ಶರಣಾಗಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery