ಹೀರೋ. ರಿಷಬ್ ಶೆಟ್ಟಿ ನಟಿಸಿ, ನಿರ್ಮಿಸಿರುವ ಅವರದ್ದೇ ಕಥೆಯ ವಿಭಿನ್ನ ಕಥಾ ಹಂದರದ ಸಿನಿಮಾ. ಥ್ರಿಲ್ಲರ್ ಅನ್ನೋದ್ರಲ್ಲಿ ಅನುಮಾನವೇನಿಲ್ಲ. ಅವರದ್ದೇ ಗರಡಿಯ ಭರತ್ ರಾಜ್ ನಿರ್ದೇಶನದ ಈ ಸಿನಿಮಾ ಪ್ಯಾನ್ ಇಂಡಿಯಾ ಮೂವಿ ಅಲ್ಲ. ಕನ್ನಡದಲ್ಲಷ್ಟೇ ಸಿದ್ಧವಾಗಿರುವ ಸಿನಿಮಾ. ಆದರೆ, ಈ ಸಿನಿಮಾ ಕೂಡಾ ರಾಜ್ಯದ ಗಡಿ ದಾಟಿದೆ.
ಹೀರೋ, ಕರ್ನಾಟಕದಲ್ಲಷ್ಟೇ ಅಲ್ಲ, ಹೊರರಾಜ್ಯಗಳಲ್ಲೂ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ದೊಡ್ಡ ಮಟ್ಟದ ರಿಲೀಸ್ ಆಗುತ್ತಿರುವುದು ಮಹಾರಾಷ್ಟ್ರದಲ್ಲಿ. ಮುಂಬೈ, ಸೊಲ್ಲಾಪುರ ಸೇರಿದಂತೆ ಕನ್ನಡ ಭಾಷಿಕರು ಹೆಚ್ಚಿರುವ ಮಹಾರಾಷ್ಟ್ರದ ಜಿಲ್ಲೆಗಳಲ್ಲಿ, ಗೋವಾದ ಪಣಜಿಯಲ್ಲಿಯೂ ದೊಡ್ಡ ಮಟ್ಟದಲ್ಲಿ ತೆರೆ ಕಾಣುತ್ತಿದೆ.
ವಿಶೇಷ ಅಂದ್ರೆ, ದೆಹಲಿಯಲ್ಲೂ ರಿಲೀಸ್ ಆಗುತ್ತಿರುವುದು. ಅತ್ತ ತಮಿಳುನಾಡಿನ ಚೆನ್ನೈ, ಕೇರಳದ ತ್ರಿವೇಂಡ್ರಂ ಸೇರಿದಂತೆ ಎಲ್ಲೆಲ್ಲಿ ಕನ್ನಡಿಗರು ಹೆಚ್ಚಿದ್ದಾರೋ, ಅಲ್ಲೆಲ್ಲ ಹೀರೋ ರಿಲೀಸ್ ಆಗುತ್ತಿರುವುದು ಈ ಬಿಡುಗಡೆಯ ಸ್ಪೆಷಾಲಿಟಿ. ಲಾಕ್ ಡೌನ್ ನಂತರ ಕರ್ನಾಟಕದ ಹೊರಗೂ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ಹೀರೋ. ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಗುಡ್ ಲಕ್.