` ಅಮ್ಮ ಆಗ್ತಿದ್ದಾರೆ ಮೊನ್ನೆ ಮೊನ್ನೆಯಷ್ಟೇ ಕಣ್ಣು ಹೊಡೆದ ಶ್ರೇಯಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಮ್ಮ ಆಗ್ತಿದ್ದಾರೆ ಮೊನ್ನೆ ಮೊನ್ನೆಯಷ್ಟೇ ಕಣ್ಣು ಹೊಡೆದ ಶ್ರೇಯಾ
Shreya Ghoshal Image

ಕಣ್ಣೂ ಹೊಡೆಯಾಕ..

ಮೊನ್ನಿ ಕಲಿತ್ಯಾನಿ..

ಬೆಲ್ಲ ಕಡಿಯಾಕ..

ನಿನ್ನೀ ಕಲಿತ್ಯಾನಿ..

ನಿನ್ನಾ ನೋಡಿ ಸುಮ್ನೆಂಗಿರ್ಲಿ.. ಎಂದು ಹಾಡಿ ಕಿಚ್ಚು ಹಚ್ಚಿರೋ ಶ್ರೇಯಾ ಘೋಷಾಲ್, ಈಗ ಅಮ್ಮನಾಗುತ್ತಿದ್ದಾರೆ. ಈಗಷ್ಟೇ ರಾಬರ್ಟ್ ಚಿತ್ರದಲ್ಲಿನ ಅವರೇ ಹಾಡಿರೋ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿದೆ.

ಶ್ರೇಯಾ ಘೋಷಾಲ್, ಬಾಲಿವುಡ್ ಗಾಯಕಿ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಫೇಮಸ್ ಆಗಿರುವ ಶ್ರೇಯಾ, 2015ರಲ್ಲಿ ಉದ್ಯಮಿ ಶಿಲಾದಿತ್ಯ ಮುಖೋಪಾಧ್ಯಾಯ ಎಂಬುವರನ್ನು ಮದುವೆಯಾಗಿದ್ದರು. ಶ್ರೇಯಾ ಅವರಿಗೀಗ 36 ವರ್ಷ. ಈಗ ತಾಯಿಯಾಗುತ್ತಿರುವ ಶ್ರೇಯಾ ಜೀವನದ ಹೊಸ ಅಧ್ಯಾಯಕ್ಕೆ ಸಿದ್ಧವಾಗುತ್ತಿರುವ ನಮಗೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಬೇಕು ಎಂದು ಕೇಳಿಕೊಂಡಿದ್ದಾರೆ.

ಶ್ರೇಯಾ ಘೋಷಾಲ್ ಅವರ ಪುಟ್ಟ ಪಾಪು ಬರುವ ಹೊತ್ತಿಗೆ ರಾಬರ್ಟ್ ಇಲ್ಲಿ ಹಿಟ್ ಆಗಿರುತ್ತದೆ. ರಾಬರ್ಟ್ ಸಕ್ಸಸ್ ನಾವು ನಿಮಗೆ ನೀಡುವ ಉಡುಗೊರೆ ಎನ್ನುವುದು ಡಿ ಬಾಸ್ ಅಭಿಮಾನಿಗಳ ವಾಗ್ದಾನ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery