ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಮೂಲಕ ಎಬ್ಬಿಸಿರುವ ಹವಾ ಎಂಥದ್ದು ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಒಬ್ಬ ನಟ ಮೇಲೇರುವುದನ್ನು ನೋಡುವುದು ಒಂದು ಖುಷಿಯಾದರೆ, ಅವರು ನಮ್ಮಿಂದ ದೂರವಾಗುತ್ತಿದ್ದಾರೆ ಎನ್ನುವ ಆತಂಕ ಮತ್ತೊಂದು ಕಡೆ. ಕೆಜಿಎಫ್ ಸೃಷ್ಟಿಕರ್ತ ಪ್ರಶಾಂತ್ ನೀಲ್, ಈಗ ಪ್ರಭಾಸ್ ಅವರನ್ನು ನಿರ್ದೇಶಿಸುತ್ತಿದ್ದಾರೆ. ಪ್ರಶಾಂತ್ ನೀಲ್ ಕನ್ನಡ ಬಿಟ್ಟರಾ ಎಂಬ ಆತಂಕದಲ್ಲಿರುವಾಗಲೇ ಯಶ್ ಅವರಿಂದಲೂ ಅಂತಹುದೇ ಆತಂಕದ ಸುದ್ದಿಯೊಂದು ಬಂದಿದೆ.
ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಕೆಜಿಎಫ್ ಚಾಪ್ಟರ್ 2ನಲ್ಲಿ, ಹಿಂದಿಯಲ್ಲೂ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡೋಕೆ ಯಶ್ ಸಿದ್ಧರಾಗುತ್ತಿದ್ದಾರೆ. ಅದಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಮತ್ತೊಂದು ಕಡೆ ಕಪಿಲ್ ದೇವ್ ಅವರ ಬಯೋಪಿಕ್ 83 ಚಿತ್ರದ ನಿರ್ಮಾಪಕ ವಿಷ್ಣು ಇಂದೂರಿ ಯಶ್ ಅವರನ್ನು ಸಂಪರ್ಕಿಸಿದ್ದಾರಂತೆ. ವಿಷ್ಣು ಇಂದೂರಿ ಮೂಲತಃ ತೆಲುಗಿನವರು. ಇವರ ಬಳಿ ಇರುವ ಕಥೆ ಯಶ್ಗೂ ಇಷ್ಟವಾಗಿದ್ದು, ಈಗ ನಿರ್ದೇಶಕರ ಹುಡುಕಾಟ ನಡೆಯುತ್ತಿದೆ ಎನ್ನಲಾಗಿದೆ.
ಒನ್ಸ್ ಎಗೇಯ್ನ್ ಇದೂ ಕೂಡಾ ಅಧಿಕೃತವಾಗಿಲ್ಲ. ವಿಷ್ಣು ಇಂದೂರಿಯಾಗಲೀ, ಯಶ್ ಆಗಲೀ ಹೌದು, ಇದು ಸತ್ಯ ಎಂದು ಹೇಳಿಲ್ಲ.
ಬದುಕೋಕೆ ಸಾಧ್ಯವಿಲ್ಲ. ದರ್ಶನ್ ಸ್ಟಾರ್ ನಟ. ದೊಡ್ಡ ನಟ. ಅವರ ಚಿತ್ರಗಳ ಬಜೆಟ್ ಕೂಡಾ ದೊಡ್ಡದು. ಹೀಗಾಗಿ ಅವರ ಸಿನಿಮಾ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗಬೇಕು. ಇಲ್ಲದೇ ಹೋದರೆ ಅಷ್ಟು ದುಡ್ಡು ರಿಕವರಿ ಸಾಧ್ಯವಿಲ್ಲ. ನಮ್ ಥಿಯೇಟರ್ ಹೋಯ್ತು ಅಂತಾ ಕಣ್ಣೀರ್ ಹಾಕೋ ಸೀನ್ ಎಲ್ಲ ಇಲ್ಲ. ಒಂದು ವಾರ ಟೈಂ ಇದೆ, ನಮಗೆ ಅಷ್ಟು ಸಾಕು. ಉಳಿದದ್ದೆಲ್ಲ ಆಮೇಲೆ' ಎಂದಿದ್ದಾರೆ ರಿಷಬ್ ಶೆಟ್ಟಿ.