Print 
darshan, rishabh shetty

User Rating: 0 / 5

Star inactiveStar inactiveStar inactiveStar inactiveStar inactive
 
ರಾಬರ್ಟ್ ಚಿತ್ರಕ್ಕೆ ನಾನೂ ವೇಯ್ಟಿಂಗ್ - ರಿಷಬ್ ಶೆಟ್ಟಿ
Darshan, Rishab Shetty

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರವನ್ನು ಕನ್ನಡ ಮತ್ತು ತೆಲುಗು ಎರಡೂ ಚಿತ್ರರಂಗಗಳು ಎದುರು ನೋಡುತ್ತಿವೆ. ದರ್ಶನ್ ಚಿತ್ರ ಎಂದ ಮೇಲೆ ಕರ್ನಾಟಕದಲ್ಲಿ ಸಹಜವಾಗಿಯೇ ಕ್ರೇಜ್ ಇರುತ್ತೆ. ಇನ್ನು ತೆಲುಗಿನಲ್ಲಿ ಕಣ್ಣೇ ಅದಿರಿಂದಿ.. ಹಾಡು ಮತ್ತು ಟ್ರೇಲರ್ ಸೃಷ್ಟಿಸಿರುವ ಕ್ರೇಜ್ ಹಾಗಿದೆ. ಹೀಗೆ ಅವರಿವರು ಚಿತ್ರದ ಬಗ್ಗೆ ಪ್ಯಾಷನ್ ಇಟ್ಟುಕೊಂಡು ಕಾಯೋದು ಸಹಜ. ಆ ಲಿಸ್ಟಿನಲ್ಲಿ ರಿಷಬ್ ಶೆಟ್ಟಿ ಕೂಡಾ ಇದ್ದಾರೆ ಎನ್ನುವುದೇ ವಿಶೇಷ.

ಕಾರಣ ಇಷ್ಟೆ, ರಿಷಬ್ ಶೆಟ್ಟಿಯವರೇ ಹೀರೋ ಆಗಿ ನಟಿಸಿರುವ, ನಿರ್ಮಾಪಕರೂ ಆಗಿರುವ, ಅವರದ್ದೇ ಕಥೆಯೂ ಇರುವ ಹೀರೋ ಸಿನಿಮಾ ಈಗ ಥಿಯೇಟರಿನಲ್ಲಿದೆ. ರಾಬರ್ಟ್ ರಿಲೀಸ್ ಆದರೆ ಮೊದಲ ಏಟು ಬೀಳೋದೂ ಹೀರೋ ಚಿತ್ರಕ್ಕೆ. ಅರ್ಧಕ್ಕರ್ಧ ಚಿತ್ರಮಂದಿರಗಳನ್ನು ಹೀರೋ, ರಾಬರ್ಟ್‍ಗಾಗಿ ಬಿಟ್ಟುಕೊಡಬೇಕು. ಹೀಗಿದ್ದರೂ.. `ನಾನೂ ರಾಬರ್ಟ್ ಚಿತ್ರಕ್ಕಾಗಿ ಕಾಯುತ್ತಿದ್ದೇನೆ..' ಎಂದಿದ್ದಾರೆ ರಿಷಬ್.

ಸದ್ಯ 165ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ನಮ್ಮ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ರಾಬರ್ಟ್ ಬಂದ್ರೆ ನಮ್ಮ ಅರ್ಧಕ್ಕರ್ಧ ಥಿಯೇಟರ್ಸ್ ಹೋಗುತ್ತವೆ. ಅದೂ ಗೊತ್ತಿದೆ. ಹಾಗಂತ ನಾವು ಯಾವುದೋ ಗುಂಗಿನಲ್ಲಿ ಬದುಕೋಕೆ ಸಾಧ್ಯವಿಲ್ಲ. ದರ್ಶನ್ ಸ್ಟಾರ್ ನಟ. ದೊಡ್ಡ ನಟ. ಅವರ ಚಿತ್ರಗಳ ಬಜೆಟ್ ಕೂಡಾ ದೊಡ್ಡದು. ಹೀಗಾಗಿ ಅವರ ಸಿನಿಮಾ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗಬೇಕು. ಇಲ್ಲದೇ ಹೋದರೆ ಅಷ್ಟು ದುಡ್ಡು ರಿಕವರಿ ಸಾಧ್ಯವಿಲ್ಲ. ನಮ್ ಥಿಯೇಟರ್ ಹೋಯ್ತು ಅಂತಾ ಕಣ್ಣೀರ್ ಹಾಕೋ ಸೀನ್ ಎಲ್ಲ ಇಲ್ಲ. ಒಂದು ವಾರ ಟೈಂ ಇದೆ, ನಮಗೆ ಅಷ್ಟು ಸಾಕು. ಉಳಿದದ್ದೆಲ್ಲ ಆಮೇಲೆ' ಎಂದಿದ್ದಾರೆ ರಿಷಬ್ ಶೆಟ್ಟಿ.