ಅಲ್ಲಿ ನೋಡಿದರೆ ಮುಂಬೈ ಗಲ್ಲಿ.. ಇಲ್ಲಿ ನೋಡಿದರೆ ಅದ್ಯಾವುದೋ ಬೀದಿ.. ಅತ್ತ ಕಡೆ ಜೈಲು.. ಇತ್ತ ಕಡೆ ಸೆಲ್ಲು.. ಮಧ್ಯದಲ್ಲೊಂದು ಮೈದಾನ.. ಅಲ್ಲೆಲ್ಲೋ ಒಂದು ದೇವಸ್ಥಾನ.. 80ರ ದಶಕದ ಡಿಸೈನ್ ಡಿಸೈನ್ ಕಾರುಗಳು... ಬಿಡುವೇ ಇಲ್ಲದೆ ದುಡಿಯುತ್ತಿರೋ 300ಕ್ಕೂ ಹೆಚ್ಚು ಸಿನಿಮಾ ಕಾರ್ಮಿಕರು...
ಇದೆಲ್ಲವೂ ಕಾಣ್ತಿರೋದು ಮಿನರ್ವ ಮಿಲ್ನಲ್ಲಿ. ಉಪೇಂದ್ರ, ಸುದೀಪ್ ಒಟ್ಟಿಗೇ ನಟಿಸುತ್ತಿರುವ ಈ ಚಿತ್ರಕ್ಕೀಗ ಆರ್.ಚಂದ್ರು 40ಕ್ಕೂ ಹೆಚ್ಚು ಸೆಟ್ಗಳನ್ನ ಹಾಕಿಸ್ತಿದ್ದಾರೆ.
ಕೆಜಿಎಫ್ ಸಿನಿಮಾಗೆ ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಿದ್ದ ಶಿವಕುಮಾರ್, ಇಲ್ಲಿ ಅದಕ್ಕಿಂತ ಭಿನ್ನವಾಗಿ ಕಲರ್ ಫುಲ್ ಸೆಟ್ ಹಾಕಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾಗೆ ಇಷ್ಟು ದೊಡ್ಡ ಬಜೆಟ್, ಅದ್ಧೂರಿತನ ಬೇಕೇ ಬೇಕು. ಇಲ್ಲಿಯೇ ಸುಮಾರು 80 ದಿನ ಶೂಟಿಂಗ್ ನಡೆಯುತ್ತೆ. ಒಟ್ಟಾರೆ 40 ಸೆಟ್ ಹಾಕಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕ ಆರ್.ಚಂದ್ರು.