ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ಡೈರೆಕ್ಷನ್ ಮಾಡಿರೋ ಸಿನಿಮಾ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಫೈನಲ್ ಹಂತದಲ್ಲಿದೆ. ಬಿಡುಗಡೆಗೆ ಮುನ್ನ ಚಿತ್ರದ ಪ್ರಚಾರವನ್ನು ವಿಭಿನ್ನವಾಗಿ ನಡೆಸಲು ಚಿಂತಿಸಿರೋ ದುನಿಯಾ ವಿಜಿ, ಸಲಗ ಕ್ರಿಕೆಟ್ ಟೂರ್ನಿ ನಡೆಸೋ ಪ್ಲಾನ್ ಮಾಡಿದ್ದಾರೆ.
ಚಿತ್ರದ ಕಲಾವಿದರೆಲ್ಲ ಒಂದು ಟೀಂ, ತಂತ್ರಜ್ಞರೆಲ್ಲ ಒಂದು ಟೀಂ. ಜೊತೆಗೆ ಅಭಿಮಾನಿ ಸಂಘಟನೆಗಳ ಸದಸ್ಯರು. ಇವರೆಲ್ಲರನ್ನೂ ಸೇರಿಸಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಮಾಡೋ ಪ್ರಯತ್ನದಲ್ಲಿದ್ದೇನೆ. ನನ್ನ ಅಭಿಮಾನಿ ಸಂಘಗಳ ಸದಸ್ಯರ ಜೊತೆ ಈ ಕುರಿತು ಪ್ಲಾನ್ ಮಾಡುತ್ತಿದ್ದೇನೆ ಎಂದಿದ್ದಾರೆ ದುನಿಯಾ ವಿಜಿ.
ಹೊಸಪೇಟೆ, ಮೈಸೂರು, ಚಿತ್ರದುರ್ಗ ಮತ್ತು ಹುಬ್ಬಳ್ಳಿಯಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಸೋದು ಸಲಗ ಟೀಂ ಪ್ಲಾನ್. ಅಂದಹಾಗೆ ಕೆ.ಪಿ.ಶ್ರೀಕಾಂತ್ ಕೂಡಾ ಒಳ್ಳೆಯ ಕ್ರಿಕೆಟ್ ಆಟಗಾರ. ಸಲಗ ಸಿನಿಮಾ ಏಪ್ರಿಲ್ನಲ್ಲಿ ಬರೋಕೆ ರೆಡಿಯಾಗಿದೆ.