Print 
darshan,

User Rating: 0 / 5

Star inactiveStar inactiveStar inactiveStar inactiveStar inactive
 
ರಾಬರ್ಟ್ ನಂತರ ಮದಕರಿ ನಾಯಕ ಬರಲ್ಲ.. ಆದರೆ..
Darshan Image

ದರ್ಶನ್ ಅವರ ಮುಂದಿನ ಚಿತ್ರ ಯಾವುದು..? ಅಭಿಮಾನಿಗಳಿಗೆ ಮೊದಲು ಕನ್ಫ್ಯೂಸ್ ಏನೂ ಇರಲಿಲ್ಲ. ಆದರೆ, ಈಗ ಗೊಂದಲ ಶುರುವಾಗಿದೆ. ಕಾರಣ, ದರ್ಶನ್ ಕ್ಲಿಯರ್ ಆಗಿ ಮದಕರಿ ನಾಯಕ ಸಿನಿಮಾ ಸದ್ಯಕ್ಕಿಲ್ಲ ಎಂದುಬಿಟ್ಟಿದ್ದಾರೆ.

ಕೊರೊನಾ ಲಾಕ್ಡೌನ್ನಿಂದಾಗಿ ಜನರೂ ಕಷ್ಟದಲ್ಲಿದ್ದಾರೆ. ಮದಕರಿ ನಾಯಕ ಚಿತ್ರದ ಬಜೆಟ್ ದೊಡ್ಡದು. ಚಿತ್ರವನ್ನು ಮಾಡಲಿಲ್ಲ ಅಂದ್ರೆ ಯಾರೂ ಕೇಳಲ್ಲ. ಆದರೆ, ಮಾಡಿದರೆ ಚೆನ್ನಾಗಿ ಮಾಡಬೇಕು. ನಮ್ಮ ಸಿನಿಮಾ ನೋಡೋವ್ರು ಕೂಡಾ ಬಡವರೇ. ಅವರೆಲ್ಲರೂ ಸರಿ ಹೋಗಲಿ. ಅರ್ಥ ವ್ಯವಸ್ಘಥೆ ಒಂದು ಹಂತಕ್ಕೆ ಸೆಟಲ್ ಆದ ಮೇಲೆ ಮದಕರಿ ನಾಯಕ ಶುರು ಮಾಡುತ್ತೇವೆ ಎಂದಿದ್ದಾರೆ ದರ್ಶನ್.

ಅತ್ತ ಮದಕರಿ ನಾಯಕ ಚಿತ್ರದ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಕೂಡಾ ಆಗಲೇ ಕಂಬಳದ ಕುರಿತ ಸಿನಿಮಾ ಜಪದಲ್ಲಿದ್ದಾರೆ. ಏಪ್ರಿಲ್ವರೆಗೂ ವೇಯ್ಟ್ ಮಾಡಿ ಎನ್ನುತ್ತಿದ್ದಾರೆ.

ರಾಬರ್ಟ್ ಚಿತ್ರಕ್ಕೆ ಸುದೀರ್ಘ ಅವಧಿಯಿಂದ ಕಾಯ್ತಿರೋ ಅಭಿಮಾನಿಗಳಿಗೆ ದರ್ಶನ್ ನಿರಾಸೆಯನ್ನೇನೂ ಮಾಡಿಲ್ಲ. ತುಂಬಾ ದಿನಗಳ ನಿರೀಕ್ಷೆಗೆ ಮಾರ್ಚ್ 11ಕ್ಕೆ ಉತ್ತರ ಸಿಗುತ್ತಿದೆ. ಉಮಾಪತಿ ಜೊತೆ ಸೇರಿ ನಿರ್ಮಿಸಿರೋ ರಾಬರ್ಟ್, ಶಿವರಾತ್ರಿಯ ದಿನ ದರ್ಶನ ಕೊಡಲಿದ್ದಾನೆ.

ದರ್ಶನ್, ಆಶಾ ಭಟ್, ವಿನೋದ್ ಪ್ರಭಾಕರ್, ಸೋನಲ್ ಮಂಥೆರೋ, ದೇವರಾಜ್, ಚಿಕ್ಕಣ್ಣ, ರವಿಶಂಕರ್, ಜಗಪತಿ ಬಾಬು, ಅವಿನಾಶ್, ತೇಜಸ್ವಿನಿ ಪ್ರಕಾಶ್, ಐಶ್ವರ್ಯಾ ಪ್ರಸಾದ್.. ಹೀಗೆ ದೊಡ್ಡ ತಾರಾಗಣವೇ ಇರೋ ಸಿನಿಮಾ ರಾಬರ್ಟ್. ಶಿವರಾತ್ರಿಗೆ ರೆಡಿಯಾಗಿ.

ಅಂದಹಾಗೆ, ರಾಬರ್ಟ್ ನಂತರ ಇನ್ನೊಂದು ಸಿನಿಮಾ ಮಾಡೋದು ಪಕ್ಕಾ ಎಂದಿದ್ದಾರೆ ದರ್ಶನ್. ಆ ಚಿತ್ರ ಯಾವುದು..? ಯಾರು ಡೈರೆಕ್ಟರ್..? ಯಾರು ಪ್ರೊಡ್ಯೂಸರ್..? ಯಾವುದನ್ನೂ ಹೇಳಿಲ್ಲ. ಆದರೆ, ವರ್ಷದ ಕೊನೆಗೆ ಇನ್ನೊಮ್ಮೆ ಸಿಗ್ತೇನೆ ಅನ್ನೋದು ಮಾತ್ರ ಪಕ್ಕಾ ಎಂದಿದ್ದಾರೆ ದಚ್ಚು.