ರಶ್ಮಿಕಾ ಮಂದಣ್ಣ ಕನ್ನಡವನ್ನೇ ಮರೆತುಬಿಟ್ಟಿದ್ದಾರಾ..? ತಾವು ಕನ್ನಡ ಸಿನಿಮಾಗಳ ಮೂಲಕ ಸಿನಿಮಾಗೆ ಬಂದೆ ಅನ್ನೋದನ್ನು ಮರೆತು ಹೋಗಿದ್ದಾರಾ..? ಇಂಥಾದ್ದೊಂದು ಪ್ರಶ್ನೆ ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು. ಅದಕ್ಕೆ ಕಾರಣ, ಪೊಗರು ಚಿತ್ರದ ಬಗ್ಗೆ ರಶ್ಮಿಕಾ ಮಂದಣ್ಣ ವರ್ತಿಸಿದ ರೀತಿ. ಚಿತ್ರದ ಪ್ರಚಾರವನ್ನು ರಶ್ಮಿಕಾ ಸರಿಯಾಗಿ ಮಾಡಲಿಲ್ಲ ಅನ್ನೋದು ಕೂಡಾ ಒಂದು ಕಾರಣ. ಇನ್ನು ತೆಲುಗು, ತಮಿಳು ನಟರ ಹುಟ್ಟುಹಬ್ಬಗಳಿಗೆಲ್ಲ ವಿಶ್ ಮಾಡುವ ಸಂಪ್ರದಾಯ ಪಾಲಿಸುವ ರಶ್ಮಿಕಾ, ಕನ್ನಡದ ತಾರೆಗಳನ್ನು ನೆನಪಿಸಿಕೊಳ್ಳೋದು ಅಪರೂಪ.
ಹೀಗಿರುವಾಗ ರಶ್ಮಿಕಾ ಪೇಜ್‍ನಲ್ಲಿ ಇದ್ದಕ್ಕಿದ್ದಂತೆ ಯಜಮಾನನ ಫೋಟೋ ಕಾಣಿಸಿತು. ಹೌದು, ಯಜಮಾನ ಚಿತ್ರ ರಿಲೀಸ್ ಆದ 2 ವರ್ಷದ ನೆನಪನ್ನು ರಶ್ಮಿಕಾ ಮಂದಣ್ಣ, ದರ್ಶನ್ ಜೊತೆಗಿರೋ ಫೋಟೋ ಹಂಚಿಕೊಂಡು ಖುಷಿಪಟ್ಟಿದ್ದರು.
ಅಂದಹಾಗೆ ಯಜಮಾನ ಮಾರ್ಚ್ 1ರಂದು ರಿಲೀಸ್ ಆಗಿತ್ತು. ಸೂಪರ್ ಹಿಟ್ ಎನಿಸಿಕೊಂಡಿತ್ತು. ಈಗ ಮಾರ್ಚ್ 11ಕ್ಕೆ ರಾಬರ್ಟ್ ರಿಲೀಸ್ ಆಗುತ್ತಿದೆ. ಅಷ್ಟೇ ಅಲ್ಲ, ತೆಲುಗಿನಲ್ಲೂ ಬರುತ್ತಿರೋ ಸಿನಿಮಾ, ದರ್ಶನ್ ಪಾಲಿಗೆ ಲಕ್ಕಿ ಮಾರ್ಚ್ ಆಗಲಿ.