Print 
kiccha sudeepa nri kannadigas,

User Rating: 0 / 5

Star inactiveStar inactiveStar inactiveStar inactiveStar inactive
 
ಅಮೆರಿಕದಲ್ಲಿರೋ ಕನ್ನಡಿಗನಿಗೆ ಸ್ಫೂರ್ತಿಯಾದ ಕಿಚ್ಚ : ಇಷ್ಟಕ್ಕೂ ಆತ ಮಾಡಿದ್ದೇನು..?
Sudeep, NRI kannadigas

ಕಿಚ್ಚ ಸುದೀಪ್ ಅವರ 25ನೇ ವರ್ಷದ ಚಿತ್ರೋತ್ಸವವನ್ನು ದುಬೈನ ಬುರ್ಜ್ ಖಲೀಫಾದಲ್ಲಿ ಸೆಲಬ್ರೇಟ್ ಮಾಡಿದ್ದು ಎಲ್ಲರಿಗೂ ಗೊತ್ತಿರೋದೆ. ಆ ದಿನ ವಿಕ್ರಾಂತ್ ರೋಣ ಚಿತ್ರದ ಲೋಗೋದ ಜೊತೆಗೆ ಕನ್ನಡ ಬಾವುಟವನ್ನೂ ಹಾರಿಸಿ ದುಬೈನಲ್ಲಿ ರಾಜ್ಯೋತ್ಸವ ಮಾಡಲಾಗಿತ್ತು.

ಬುರ್ಜ್ ಖಲೀಫಾ ಮೇಲೆ ಕನ್ನಡ ಧ್ವಜ ಹಾರಿದಾಗ ಆದ ರೋಮಾಂಚನವೇ ಬೇರೆ. ನನ್ನ ಜೊತೆ ಬಂದಿದ್ದವರೆಲ್ಲರೂ ವಿಕ್ರಾಂತ್ ರೋಣ ಚಿತ್ರದ ಲೋಗೋ, ನನ್ನ 25 ವರ್ಷದ ಚಿತ್ರೋತ್ಸವ ಎಲ್ಲವನ್ನೂ ಮರೆತು ಕನ್ನಡ ಬಾವುಟದ ಬಗ್ಗೆ ಬಾವುಕರಾಗಿ ಪ್ರತಿಕ್ರಿಯಿಸಿದ್ದರು ಎಂದು ಖುಷಿಯಿಂದ ಹೇಳಿಕೊಂಡಿದ್ದರು ಸುದೀಪ್.

ಇದು ಸುದೀಪ್ ಅವರ ಸಾಧನೆಯಾದರೆ, ಅವರ ಈ ಸಾಹಸ ಅಮೆರಿಕದಲ್ಲಿರೋ ಕನ್ನಡಿಗನಿಗೆ ಬೇರೊಂದು ರೀತಿಯಲ್ಲಿ ಸ್ಫೂರ್ತಿ ತುಂಬಿದೆ. ನ್ಯೂಯಾರ್ಕ್ನಲ್ಲಿರೋ ಶಂಕರ್ ಅನ್ನೋ ಅಭಿಮಾನಿ ಈಗ ತಮ್ಮ ಕಾರಿಗೆ ಕನ್ನಡ ಎಂದೇ ನಾಮಕರಣ ಮಾಡಿದ್ದಾರೆ.

ನ್ಯೂಯಾರ್ಕ್ನಲ್ಲಿ ಜನ ತಮ್ಮ ಕಾರಿಗೆ ನಂಬರ್ ಪ್ಲೇಟ್ ಅಲ್ಲದೆ ತಮ್ಮದೇ ಆದ ಹೆಸರನ್ನೂ ಇಟ್ಟುಕೊಳ್ಳಬಹುದು. ಅದಕ್ಕೆ ಸ್ವಲ್ಪ ಹಣ ಕಟ್ಟಬೇಕು ಅಷ್ಟೆ. ಇತ್ತ ಸುದೀಪ್ ಅವರ ಈ ಸಾಹಸವನ್ನು ನೋಡಿದ ಶಂಕರ್, ನಂತರ ತಮ್ಮ ಕಾರಿಗೆ KANNADA ಎಂದು ನಾಮಕರಣ ಮಾಡಿದ್ದಾರೆ. ಅಷ್ಟೇ ಅಲ್ಲ, ಇದಕ್ಕೆ ಸುದೀಪ್ ಅವರೇ ಸ್ಫೂರ್ತಿ ಎಂದು ಕೂಡಾ ಬರೆದುಕೊಂಡಿದ್ದಾರೆ.

ಎಲ್ಲಾದರೂ ಇರು, ಹೇಗಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು.. ಕನ್ನಡವೇ ಸತ್ಯ.. ಕನ್ನಡವೇ ನಿತ್ಯ