` ಆ ಆಕ್ಸಿಡೆಂಟ್ ಹೆಂಡತಿಗೂ ಗೊತ್ತಿರಲಿಲ್ಲ : ರಿಷಬ್ ಶೆಟ್ಟಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಆ ಆಕ್ಸಿಡೆಂಟ್ ಹೆಂಡತಿಗೂ ಗೊತ್ತಿರಲಿಲ್ಲ : ರಿಷಬ್ ಶೆಟ್ಟಿ
Rishab Shetty. Pragathi Shetty

ಹೀರೋ ಸಿನಿಮಾ ರಿಲೀಸ್ ಆಗುತ್ತಿರೋ ಹೊತ್ತಿನಲ್ಲಿ ಸದ್ದು ಮಾಡಿದ ವಿಡಿಯೋ ಅದು. ಬೆಳ್ಳೂರು ಬಳಿಯ ಕಾಡಿನಲ್ಲಿ ನಡೆಯುತ್ತಿದ್ದ ಚೇಸಿಂಗ್ ಸೀನ್ ಶೂಟಿಂಗ್ನಲ್ಲಿ ನಡೆದಿದ್ದ ಅಪಘಾತವದು. ಆ ಆಕಸ್ಮಿಕದಲ್ಲಿ ರಿಷಬ್ ಶೆಟ್ಟಿ ಬೆನ್ನಿಗೆ ಗಾಯವಾಗಿತ್ತು. ತಡೆಯಲಾಗದ ನೋವು. ಆದರೂ.. ಇದನ್ನು ರಿಷಬ್ ಶೆಟ್ಟಿ ಗುಟ್ಟಾಗಿಟ್ಟಿದ್ದರು. ಎಷ್ಟರಮಟ್ಟಿಗೆ ಎಂದರೆ, ರಿಷಬ್ ಶೆಟ್ಟಿಯವರಿಗೆ ಈ ಮಟ್ಟಿಗೆ ಗಾಯವಾಗಿದೆ ಅನ್ನೋದು ಸೆಟ್ಟಿನ ಅದೆಷ್ಟೋ ಹುಡುಗರಿಗೆ ಗೊತ್ತಿರಲಿಲ್ಲ.

ಏನೂ ಆಗಲಿಲ್ಲವಲ್ಲ,  ದೇವರು ದೊಡ್ಡವನು ಎಂದುಕೊಂಡಿದ್ದ ಹುಡುಗರಿಗೆ ರಿಷಬ್ ಶೆಟ್ಟಿ ತಾವು ಅನುಭವಿಸುತ್ತಿದ್ದ ನೋವನ್ನು ಹೇಳಿಯೂ ಇರಲಿಲ್ಲ.  ಚಿತ್ರತಂಡದ ಕೆಲವರಿಗಷ್ಟೇ ಗೊತ್ತಿದ್ದ ವಿಷಯವನ್ನು ರಿಷಬ್ ಶೆಟ್ಟಿ ಮಚ್ಚಿಟ್ಟುಬಿಟ್ಟಿದ್ದರು. ಅದು ಎಷ್ಟರಮಟ್ಟಿಗೆ ಗೊತ್ತೇ..

ಸಿನಿಮಾ ಶೂಟಿಂಗ್ ಒಟ್ಟಾರೆ ನಡೆದಿದ್ದು 43 ದಿನ. ಆ 43 ದಿನದಲ್ಲಿ ಕೆಲವು ಸಾಹಸ ದೃಶ್ಯಗಳನ್ನು ನಾನೇ ಕಂಪೋಸ್ ಮಾಡಿದ್ದೆ. ಸ್ಟಂಟ್ ಮ್ಯಾನ್ ಸೇರಿದಂತೆ ಒಂದು ರೆಗ್ಯುಲರ್ ಫೈಟಿಂಗ್ ಶೂಟಿಂಗ್ ವ್ಯವಸ್ಥೆ ಇರಲಿಲ್ಲ. ಕಾರಣ, ಲಾಕ್ ಡೌನ್ ನಿರ್ಬಂಧಗಳು. ಆದರೆ, ಸುರಕ್ಷತೆಯನ್ನು ಕೈಬಿಟ್ಟಿರಲಿಲ್ಲ. ಹೀಗಾಗಿಯೇ ಬಚಾವ್ ಆದೆವು. ಆ ಘಟನೆಯನ್ನು ನಾನು ಪ್ರಗತಿಗೂ ಹೇಳಿರಲಿಲ್ಲ. ಪ್ರಗತಿ ಶೂಟಿಂಗ್ ಸೆಟ್ಟಿಗೆ ಭೇಟಿ ಕೊಟ್ಟಿದ್ದೇ ಚಿತ್ರೀಕರಣದ ಕೊನೆಯ ದಿನ. ಆ ದಿನ ಅದು ಗೊತ್ತಾದಾಗ ಪ್ರಗತಿ ಕೂಗಾಡಿದ್ದರು ಎಂದು ಹೇಳಿಕೊಂಡಿದ್ದಾರೆ ರಿಷಬ್ ಶೆಟ್ಟಿ.

ಪತ್ನಿಗೂ ಗೊತ್ತಾಗದಂತೆ ರಹಸ್ಯ ಕಾಪಾಡಿಕೊಳ್ಳೋಕೆ ಕಾರಣ ಬೇರೇನೂ ಇರಲಿಲ್ಲ. ಆಕೆ ಮಗುವಿನೊಂದಿಗೆ ಇದ್ದರು. ಹೀಗಾಗಿ ವಿಷಯ ಗೊತ್ತಾದರೆ ಟೆನ್ಷನ್ ಆಗುತ್ತಾರೆ ಎಂದು ಹೇಳೋಕೆ ಹೋಗಿರಲಿಲ್ಲ. ವಿಷಯ ಗೊತ್ತಾದ ದಿನವಂತೂ ಇಡೀ ದಿನ ಅತ್ತಿದ್ದರು. ತುಂಬಾ ಅಪ್ಸೆಟ್ ಆಗಿದ್ದರು ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ ರಿಷಬ್ ಶೆಟ್ಟಿ.

ಹೀರೋ ಚಿತ್ರತಂಡ ಇಷ್ಟೆಲ್ಲ ಹೋರಾಟ ಮಾಡಿ ಮಾಡಿರುವ ಸಿನಿಮಾ ಇದೇ ಮಾರ್ಚ್ 5ಕ್ಕೆ ರಿಲೀಸ್ ಆಗುತ್ತಿದೆ. ರಿಷಬ್ ಶೆಟ್ಟಿ, ಗಾನವಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಭರತ್ ರಾಜ್ ನಿರ್ದೇಶಕ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery