Print 
hero, rishab shetty ghanavi laxman,

User Rating: 1 / 5

Star activeStar inactiveStar inactiveStar inactiveStar inactive
 
ಮಗಳು  ಜಾನಕಿ ಹೀರೋಗೆ ಹೀರೋಯಿನ್ ಆದ ಕಥೆ
Ghanavi Laxman

ಟಿ ಎನ್ ಸೀತಾರಾಮ್ ಅವರ ಮಗಳು ಜಾನಕಿ ಧಾರಾವಾಹಿಯನ್ನು ಪ್ರೇಕ್ಷಕರು ಇವತ್ತಿಗೂ ಮರೆತಿಲ್ಲ. ಅವರೆಲ್ಲರ ಕಣ್ಣಿನಲ್ಲಿ ಅಚ್ಚಳಿಯದೆ ಉಳಿದಿರುವ ಮುಖ ಗಾನವಿ ಲಕ್ಷ್ಮಣ್ ಅವರದ್ದು. ಆ ಜಾನಕಿ ಹೀರೋಯಿನ್ ಆಗಿರೋ ಸಿನಿಮಾ ಹೀರೋ. ರಿಷಬ್ ಶೆಟ್ಟಿ ಹೀರೋ ಆಗಿರೋ ಹೀರೋ ಚಿತ್ರದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಂಡಿರೋದು ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷ್ಮಣ್.

ಹೀರೋಯಿನ್  ಗಾನವಿಯ ಪರ್ಸನಲ್ ಲೈಫ್ ಕೂಡಾ ಅಷ್ಟೇ ಇಂಟ್ರೆಸ್ಟಿಂಗ್. ಗಾನವಿ ಓದಿದ್ದು ಸೈಕಾಲಜಿ. ಸಂಪ್ರದಾಯಸ್ಥ ಕುಟುಂಬವಾದರೂ, ಹಠಕ್ಕೆ ಬಿದ್ದು ಕಲಿತಿದ್ದು ಡ್ಯಾನ್ಸ್. ಚಿಕ್ಕಮಗಳೂರಿನ ಶಾಲೆಯೊಂದರಲ್ಲಿ ಟೀಚರ್ ಆಗಿದ್ದಾಗ ಕಥಕ್ಕಳಿ ಕಲಿತ ಗಾನವಿ, ನಂತರ ಡ್ಯಾನ್ಸ್ ಟೀಚರ್ ಆದರು. ಕೊರಿಯೋಗ್ರಫಿಯೂ ಚೆನ್ನಾಗಿ ಗೊತ್ತು. ರಂಗಭೂಮಿಯ ಪರಿಚಯವೂ ಚೆನ್ನಾಗಿದೆ.

ಮೊದಲ ಚಿತ್ರದಲ್ಲೇ ಮಲ್ಟಿಪಲ್ ಡೈಮೆನ್ಷನ್ ಇರೋ, ವಿವಿಧ ಶೇಡ್‍ಗಳಿರೋ ಸಿನಿಮಾ ಸಿಕ್ಕಿದೆ. ಹೇಗೆ ನಟಿಸಿದ್ದೇನೆ ಅನ್ನೋ ಕುತೂಹಲ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ನಾನೂ ಕಾಯುತ್ತಿದ್ದೇನೆ ಎಂದಿದ್ದಾರೆ ಗಾನವಿ.

ಭರತ್ ರಾಜ್ ನಿರ್ದೇಶನದ ಚಿತ್ರದಲ್ಲಿ ರಿಷಬ್ ಶೆಟ್ಟಿ ಹೀರೋ. ಮಾರ್ಚ್ 5ಕ್ಕೆ ರಿಲೀಸ್ ಆಗುತ್ತಿರೋ ಸಿನಿಮಾವನ್ನು ಚಿತ್ರರಂಗ ಮತ್ತು ಪ್ರೇಕ್ಷಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.