ಪುನೀತ್ ರಾಜ್ಕುಮಾರ್ ಅವರಿಗೆ ವಯಸ್ಸು 45 ವರ್ಷ. ಅವರ ಚಿತ್ರರಂಗದ ಜರ್ನಿಗೂ 45 ವರ್ಷ. ಹೌದು, ಪುನೀತ್ ತೊಟ್ಟಿಲನಲ್ಲಿದ್ದಾಗಲೇ ನಟಿಸಿದ್ದವರು. ಪ್ರೇಮದ ಕಾಣಿಕೆಯಲ್ಲಿ ರಾಜ್ ಮತ್ತು ಜಯಮಾಲ ಅವರ ಮಗುವಿನ ಪಾತ್ರದಲ್ಲಿ ಕಾಣಿಸಿದ್ದರು. ಪ್ರೇಮದ ಕಾಣಿಕೆ ರಿಲೀಸ್ ಆಗಿ ಫೆಬ್ರವರಿ 28ಕ್ಕೆ 45 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಬ್ಬವನ್ನೇ ಮಾಡಿದ್ದಾರೆ.
ಪುನೀತ್ ಅವರ 45ನೇ ವರ್ಷದ ಸಂಭ್ರಮ ಶುರು ಮಾಡಿದ್ದು ಸ್ವತಃ ಅಭಿಮಾನಿಗಳೇ ಎನ್ನುವುದು ವಿಶೇಷ. ಹೀಗಾಗಿ ಇಡೀ ದಿನ ಪುನೀತ್ ಅವರಿಗೆ ಶುಭಾಶಯಗಳ ಸುರಿಮಳೆ. ಚಿತ್ರರಂಗದ ಅಜಾತ ಶತ್ರುವಾಗಿರೋ ಪುನೀತ್ ಅವರಿಗೆ ಚಿತ್ರರಂಗದ ಪ್ರತಿಯೊಬ್ಬರೂ ಶುಭ ಹಾರೈಸಿದ್ದು ವಿಶೇಷ.
ಸುದೀಪ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಕಾರ್ತಿಕ್ ಗೌಡ, ಡ್ಯಾನಿಷ್ ಸೇಠ್, ಸಂತೋಷ್ ಆನಂದ ರಾಮ್, ಪವನ್ ಒಡೆಯರ್, ಹೇಮಂತ್ ರಾವ್.. ಹೀಗೆ ಇಡೀ ಚಿತ್ರರಂಗ ಶುಭ ಹಾರೈಸಿತು. ಈ ದಿನವನ್ನು ವಿಶೇಷವಾಗಿಸಿದ ಎಲ್ಲರಿಗೂ ಪುನೀತ್ ಧನ್ಯವಾದ ಅರ್ಪಿಸಿದ್ರು.