ಗಾಳಿಪಟ 2, ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ. ಇದು ಗಾಳಿಪಟ ಚಿತ್ರದ ಸೀಕ್ವೆಲ್ಲಾ..? ಭಟ್ಟರು ಹೇಳಿಲ್ಲ. ಗಾಳಿಪಟದಲ್ಲಿ ಇದ್ದ ಗಣೇಶ್ ಮತ್ತು ದಿಗಂತ್ ಇಲ್ಲೂ ಇದ್ದಾರೆ. ರಾಜೇಶ್ ಕೃಷ್ಣ ಬದಲಿಗೆ ಪವನ್ ಕುಮಾರ್ ಬಂದಿದ್ದಾರೆ. ಒಬ್ಬ ಹೀರೋಯಿನ್ ಶರ್ಮಿಳಾ ಮಾಂಡ್ರೆ ಅನ್ನೋದು ಕನ್‍ಫರ್ಮ್. ಆದರೆ.. ಉಳಿದ ಇಬ್ಬರಿಗೆ ಯಾರು..?
ಯಾರಿರಬಹುದು ಅನ್ನೋ ಕುತೂಹಲಕ್ಕೆ ರೆಕ್ಕೆ ಪುಕ್ಕ ಬಂದಿದೆ. ಶರಣ್ ಜೊತೆ ರಾಜ್‍ವಿಷ್ಣು ಚಿತ್ರದಲ್ಲಿ ನಟಿಸಿದ್ದ ವೈಭವಿ ಶಾಂಡಿಲ್ಯ ಹಾಗೂ ಸಂಯುಕ್ತಾ ಮೆನನ್ ನಟಿಸೋದು ಹೆಚ್ಚೂ ಕಡಿಮೆ ಪಕ್ಕಾ ಆಗಿದೆ. ಸದ್ಯಕ್ಕೆ ಗಾಳಿಪಟ ಟೀಂ, ಕಝಕಿಸ್ತಾನದಲ್ಲಿದೆ.