ಪುನೀತ್ ರಾಜ್ಕುಮಾರ್ ಈಗ ಆರ್ಮಿ ಸೇರಿದ್ದಾರೆ. ಇದುವರೆಗೂ ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರೋ ಪುನೀತ್, ಇದುವರೆಗೆ ಸೈನಿಕನ ಪಾತ್ರದಲ್ಲಿ ನಟಿಸಿರಲಿಲ್ಲ. ಜೇಮ್ಸ್ ಚಿತ್ರದಲ್ಲಿ ಪುನೀತ್ ಸೈನಿಕನಾಗಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣದಲ್ಲಿರೋ ಜೇಮ್ಸ್ ಚಿತ್ರದಲ್ಲಿ ಪುನೀತ್ ಸೋಲ್ಜರ್ ಆಗಿದ್ದಾರೆ. ಬಹದ್ದೂರ್ ಚೇತನ್ ನಿರ್ದೇಶನದ ಚಿತ್ರವಿದು. ಹೀಗಾಗಿ ನಿರೀಕ್ಷೆಗಳೂ ಹೆಚ್ಚಿವೆ. ಎ. ಹರ್ಷ ನಿರ್ದೇಶನದಲ್ಲಿ ಹಾಡುಗಳು ಹಾಗೂ ವಿಜಯ್ ನಿರ್ದೇಶನದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ.