ಜಗ್ಗೇಶ್ ಮತ್ತು ದರ್ಶನ್ ಫ್ಯಾನ್ಸ್ ನಡುವಿನ ವಾರ್ನಲ್ಲಿ ಕೇಳಿ ಬರುತ್ತಿರೋ ಮತ್ತೊಂದು ಹೆಸರು ನಿರ್ಮಾಪಕ ವಿಖ್ಯಾತ್ ಅವರದ್ದು. ಅವರು ಇತ್ತೀಚೆಗೆ ರಿಲೀಸ್ ಆಗಿದ್ದ ಇನ್ಸ್ಪೆಕ್ಟರ್ ವಿಕ್ರಂ ಎಂಬ ಚಿತ್ರದ ಪ್ರೊಡ್ಯೂಸರ್. ಅಂದಹಾಗೆ ಜಗ್ಗೇಶ್ ಅವರ ಕಾಂಟ್ರವರ್ಸಿ ಆಡಿಯೋದಲ್ಲಿರೋ ಇನ್ನೊಂದು ಧ್ವನಿ ಇವರದ್ದೇ. ಅರ್ಥಾತ್, ಜಗ್ಗೇಶ್ ಮಾತನಾಡಿರೋದು ಇವರ ಜೊತೆಯಲ್ಲೇ. ಈಗ ವಿಖ್ಯಾತ್ ಒಂದು ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ.
ಆಡಿಯೋದಲ್ಲಿರೋ ಧ್ವನಿ ನನ್ನದೇ. ಆಡಿಯೋದಲ್ಲಿ ಮಾತನಾಡಿರೋದು ಜಗ್ಗೇಶ್. ಜಗ್ಗೇಶ್ ಅವರದ್ದೇ ವಾಯ್ಸ್. ಇನ್ನು ಈ ಆಡಿಯೋ ಲೀಕ್ ಆಗಿದ್ದು ಹೇಗೆ ಅನ್ನೋದು ನನಗೆ ಗೊತ್ತಿಲ್ಲ. ನಾನು ಆ ಆಡಿಯೋವನ್ನು ರೆಕಾರ್ಡ್ ಕೂಡಾ ಮಾಡಿಲ್ಲ. ಈ ಆಡಿಯೋ ಲೀಕ್ ಆದ ಬಗ್ಗೆ ತನಿಖೆಯಾಗಲಿ ಎಂದಿದ್ದಾರೆ.
ಪರೋಕ್ಷವಾಗಿ ಜಗ್ಗೇಶ್ ಅವರ ಕಡೆಯಿಂದಲೇ ಈ ಆಡಿಯೋ ಲೀಕ್ ಆಯಿತು ಎಂದಿದ್ದಾರೆ ವಿಖ್ಯಾತ್. ವಿಶೇಷ ಅಂದ್ರೆ ಇದೇ ವಿಖ್ಯಾತ್ ಅವರ ಇತ್ತೀಚಿನ ಚಿತ್ರದಲ್ಲಿ ದರ್ಶನ್ ಅತಿಥಿ ನಟನಾಗಿ ನಟಿಸಿದ್ದರು. ಅಷ್ಟೇ ಅಲ್ಲ, ವಿಖ್ಯಾತ್ ಅವರು ಜಗ್ಗೇಶ್ ಅವರಿಗಾಗಿ ರಂಗನಾಯಕ ಅನ್ನೋ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಈಗ ಪ್ರಶ್ನೆಗಳಿಷ್ಟೆ. ವಿಖ್ಯಾತ್ ಈ ಆಡಿಯೋ ಲೀಕ್ ಮಾಡಿಲ್ಲ ಎಂದಾದರೆ, ಆಡಿಯೋ ಲೀಕ್ ಮಾಡಿದ್ದು ಜಗ್ಗೇಶ್ ಅವರಾ..? ಗೊತ್ತಿಲ್ಲ, ಉತ್ತರಿಸಬೇಕಾದವರು ಸ್ವತಃ ಜಗ್ಗೇಶ್.