ರಾಬರ್ಟ್. ದರ್ಶನ್ ಅಭಿನಯದ ಈ ಚಿತ್ರ ಬಿಡುಗಡೆಗೂ ಮೊದಲೇ ಹವಾ ಎಬ್ಬಿಸಿದೆ. ಟೀಸರು, ಟ್ರೇಲರುಗಳ ಜೊತೆ ಇತ್ತೀಚೆಗೆ ರಿಲೀಸ್ ಆದ ಕಣ್ಣು ಹೊಡ್ಯಾಕ ಮೊನ್ನೀ ಕಲತ್ಯಾನಿ.. ಅನ್ನೋ ಉತ್ತರ ಕರ್ನಾಟಕದ ಕನ್ನಡವನ್ನೇ ರೊಮ್ಯಾಂಟಿಕ್ ಆಗಿ ಬಳಸಿಕೊಂಡಿರೋ ಹಾಡು ಹೊಸದೊಂದು ಥ್ರಿಲ್ ಕೊಟ್ಟಿದೆ. ಹೀಗಿರುವಾಗ ಇಡೀ ಚಿತ್ರತಂಡ ಉತ್ತರ ಕರ್ನಾಟಕದಿಂದಲೇ ದಿಗ್ವಿಜಯ ಆರಂಭಿಸುತ್ತಿದೆ.
ಫೆ.28ರಂದು ಹುಬ್ಬಳ್ಳಿಯ ರೈಲ್ವೇ ಗ್ರೌಂಡ್ಸ್‍ನಲ್ಲಿ ರಾಬರ್ಟ್ ಪ್ರೀ-ರಿಲೀಸ್ ಈವೆಂಟ್ ನಡೆಯುತ್ತಿದೆ. ಆ ಕಾರ್ಯಕ್ರಮದಲ್ಲಿ ದರ್ಶನ್, ತರುಣ್ ಸುಧೀರ್, ಉಮಾಪತಿ, ಆಶಾ ಭಟ್, ವಿನೋದ್ ಪ್ರಭಾಕರ್.. ಸೇರಿದಂತೆ ಇಡೀ ಚಿತ್ರತಂಡ ಪಾಲ್ಗೊಳ್ಳಲಿದೆ.