ಬಾಕ್ಸಾಫೀಸ್ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದ ಕೆಜಿಎಫ್, ಈಗ ಚಾಪ್ಟರ್ 2ನಲ್ಲಿ ಅದನ್ನೂ ಮೀರಿ ಮುನ್ನಡೆಯುತ್ತಿದೆ. ಈಗಾಗಲೇ ಕೆಜಿಎಫ್ ಚಾಪ್ಟರ್ 2ನ ಒಂದೇ ಒಂದು ಟೀಸರ್ ದಾಖಲೆ ಬರೆದಿದೆ. ಈಗ ತೆಲುಗು ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟವಾದ ಸುದ್ದಿ ಬಂದಿದೆ. ಮೂಲಗಳ ಪ್ರಕಾರ ತೆಲುಗಿನ ಸ್ಟಾರ್ ವಿತರಕ ದಿಲ್ ರಾಜ್, ಕೆಜಿಎಫ್ ಚಾಪ್ಟರ್ 2 ಚಿತ್ರದ ಥಿಯೇಟರ್ ರೈಟ್ಸ್ನ್ನು 65 ಕೋಟಿಗೆ ಖರೀದಿಸಿದ್ದಾರೆ.
ಕೆಜಿಎಫ್ ಚಾಪ್ಟರ್ 1, ತೆಲುಗಿನಲ್ಲಿ 5 ಕೋಟಿಗೆ ಸೇಲ್ ಆಗಿತ್ತು. 20 ಕೋಟಿ ಬಿಸಿನೆಸ್ ಮಾಡಿತ್ತು. ಬಾಹುಬಲಿ ನಿರ್ಮಿಸಿದ್ದ ವಾರಾಹಿ ಸಂಸ್ಥೆ ಬದಲಿಗೆ ಈಗ ದಿಲ್ ರಾಜು ಬಂದಿದ್ದಾರೆ. ಯಶ್, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಶ್ರೀನಿಧಿ ಶೆಟ್ಟಿ ನಟಿಸಿರುವ ಚಿತ್ರ ಜುಲೈ 16ಕ್ಕೆ ರಿಲೀಸ್ ಆಗುತ್ತಿದೆ. ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಸಿನಿಮಾ ಈಗಾಗಲೇ 2021ರ ಭಾರಿ ನಿರೀಕ್ಷೆಯ ಚಿತ್ರಗಳ ಪಟ್ಟಿಯಲ್ಲಿದೆ.