ಜೊತೆ ಜೊತೆಯಲಿ, ನವಗ್ರಹ, ಸಾರಥಿ, ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರಗಳ ಮೂಲಕ ಸ್ಟಾರ್ ಡೈರೆಕ್ಟರ್ ಪಟ್ಟಕ್ಕೇರಿರುವ ದಿನಕರ್ ತೂಗುದೀಪ್, ಈಗ ಹೊಸ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಅದರಲ್ಲೂ ಈ ಬಾರಿ ಪುನೀತ್ ರಾಜ್ಕುಮಾರ್ ಜೊತೆ ಸಿನಿಮಾ ಮಾಡ್ತಾರೆ. ಇಂತಾದ್ದೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ದಿನಕರ್, ನಟರನ್ನು ಮನಸ್ಸಿನಲ್ಲಿಟ್ಟುಕೊಂಡು ಕಥೆ ಮಾಡುವವರಲ್ಲ. ಈ ಬಾರಿ ಲಾಕ್ ಡೌನ್ ಮಧ್ಯೆ ಒಂದು ಚೆಂದದ ಕಥೆ ಸಿದ್ಧ ಮಾಡಿಟ್ಟುಕೊಂಡಿದ್ದು, ಆ ಕಥೆಗೆ ಪುನೀತ್ ಹೊಂದುತ್ತಾರಂತೆ. ಈ ಬಗ್ಗೆ ಪುನೀತ್ ಆಗಲಿ, ದಿನಕರ್ ಆಗಲೀ ಏನೂ ಹೇಳಿಲ್ಲ. ಆದರೆ, ಗಾಂಧಿನಗರದಲ್ಲಿ ಸುದ್ದಿ ಭರ್ಜರಿಯಾಗಿ ಹರಿದಾಡುತ್ತಿರೋದಂತೂ ಸತ್ಯ. ನಿಜವಾದರೆ, ಒಂದೊಳ್ಳೆ ಸಿನಿಮಾ ಗ್ಯಾರಂಟಿ.