ಅಭಿಷೇಕ್ ಅಂಬರೀಷ್ ಮೊದಲ ಚಿತ್ರದಲ್ಲಿ ಚೆಂದದ ಹಾಡಿಗೆ ಹೆಜ್ಜೆ ಹಾಕಿದ್ದ ರಚಿತಾ ರಾಮ್, ಈಗ ಅಭಿಗೆ ಹೀರೋಯಿನ್ ಆಗುತ್ತಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ನಲ್ಲಿ ರಚಿತಾ ರಾಮ್ ಹೀರೋಯಿನ್. ಅಮರ್ ಚಿತ್ರದಲ್ಲಿ ಲವರ್ ಬಾಯ್ ಆಗಿದ್ದ ಅಭಿಷೇಕ್, ಇಲ್ಲಿ ರಗಡ್ ಬಾಯ್ ಆಗಿದ್ದಾರೆ.
ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನೊಬ್ಬ ಹೀರೋಯಿನ್ ಆಗಿ ಕೃಷ್ಣ ತುಳಸಿ ಧಾರಾವಾಹಿ ಖ್ಯಾತಿಯ ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದಾರೆ.
ಸುಧೀರ್ ಕೆ.ಎಂ.ನಿರ್ಮಾಣದ ಸಿನಿಮಾ, ಫಸ್ಟ್ ಲುಕ್ನಿಂದಲೇ ಗಮನ ಸೆಳೆದಿದೆ. ದುನಿಯಾ ಸೂರಿ-ಅಭಿಷೇಕ್ ಅಂಬರೀಷ್-ರಚಿತಾ ರಾಮ್ ಕಾಂಬಿನೇಷನ್ ಸೆನ್ಸೇಷನ್ ಸೃಷ್ಟಿಸಿದೆ.