` ಶ್ರೀನಗರ ಕಿಟ್ಟಿ ವಿಲನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಶ್ರೀನಗರ ಕಿಟ್ಟಿ ವಿಲನ್
Srinagara Kitty

ಶ್ರೀನಗರ ಕಿಟ್ಟಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಪೋಷಕ ನಟನಾಗಿ. ಖಳನಟನಾಗಿ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಹೀರೋ ಆದ ಶ್ರೀನಗರ ಕಿಟ್ಟಿ ಈಗ ಮತ್ತೆ ವಿಲನ್ ಆಗುತ್ತಿದ್ದಾರೆ. ಅದೂ ಉಪೇಂದ್ರ ಎದುರಿಗೆ.

ಉಪೇಂದ್ರ ಅಭಿನಯದ ಬುದ್ದಿವಂತ 2 ಚಿತ್ರದಲ್ಲಿ ಕಿಟ್ಟಿ ವಿಲನ್. ರಘುವರನ್ ಶೈಲಿಯ ವಿಲನ್ ಕ್ಯಾರೆಕ್ಟರ್ ಪಾತ್ರವಂತೆ ಅದು.

ಚಿತ್ರದಲ್ಲಿ ಕಿಟ್ಟಿ ಅವರ ಮ್ಯಾನರಿಸಂ ರಘುವರನ್ ಅವರ ಶೈಲಿಯಲ್ಲೇ ಇರುತ್ತೆ. ವಿಲನ್ ಆದರೂ ಬುದ್ದಿವಂತ. ಮೈಂಡ್ ಗೇಮ್ ಇರುತ್ತೆ. ಕಿಟ್ಟಿ ಆ ಪಾತ್ರದಲ್ಲಿ ಸಖತ್ ಆಗಿ ಕಾಣ್ತಾರೆ ಅನ್ನೋ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ ನಿರ್ದೇಶಕ ಜಯರಾಮ್.