ಯಜುವೇಂದ್ರ ಚಾಹಲ್, ಟೀಂ ಇಂಡಿಯಾದ ನಂಬಿಕಸ್ತ ಬೌಲರ್. ಅದ್ಭುತ ಆಟಗಾರನಷ್ಟೇ ಅಲ್ಲ, ಸಿಕ್ಕಾಪಟ್ಟೆ ತರಲೆಯೂ ಹೌದು. ಇತ್ತೀಚೆಗಷ್ಟೇ ಮದುವೆಯಾಗಿರುವ ಚಾಹಲ್, ತಮ್ಮ ಪತ್ನಿಯೊಂದಿಗೆ ಯಶ್ ದಂಪತಿಯನ್ನು ಭೇಟಿ ಮಾಡಿರುವುದು ವಿಶೇಷ. ಅದೂ ಬೆಂಗಳೂರಿನಲ್ಲೇ.
ಯಶ್ ಜೊತೆಯಲ್ಲೇ ಇರುವ ಅವರ ಗೆಳೆಯ ಹಾಗೂ ಆಪ್ತ ಸಹಾಯಕ ಚೇತನ್ ಮದುವೆಯಲ್ಲಿ ಯಶ್ ದಂಪತಿ ಹಾಜರಿದ್ದರು. ಈ ವೇಳೆಯಲ್ಲೇ ಚಾಹಲ್ ಹಾಗೂ ಧನಶ್ರೀ ವರ್ಮಾ ಯಶ್ ಮತ್ತು ರಾಧಿಕಾರನ್ನು ಭೇಟಿ ಮಾಡಿದ್ದಾರೆ.
ಏಕೆ ಅನ್ನೋದು ಗೊತ್ತಿಲ್ಲವಾದರೂ, ಸದ್ಯಕ್ಕೆ ಈ ಫೋಟೋಗಳು ಸೆನ್ಸೇಷನ್ ಸೃಷ್ಟಿಸಿವೆ.