` ವಿಶ್ವಾಸ ಕಳೆದುಕೊಂಡಿಲ್ಲ. ಪಾಸಿಟಿವ್ ಆಗಿದ್ದೇನೆ - ರಾಗಿಣಿ ದ್ವಿವೇದಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವಿಶ್ವಾಸ ಕಳೆದುಕೊಂಡಿಲ್ಲ. ಪಾಸಿಟಿವ್ ಆಗಿದ್ದೇನೆ - ರಾಗಿಣಿ ದ್ವಿವೇದಿ
Ragini Dwivedi

ಅನಿರೀಕ್ಷಿತವಾಗಿ ಡ್ರಗ್ಸ್ ಕೇಸ್‍ನಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿ, ಜಾಮೀನಿನ ಮೇಲೆ ಹೊರಬಂದಿದ್ದಾರೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿರೋ ರಾಗಿಣಿ, ಹಂತ ಹಂತವಾಗಿ ಓಪನಪ್ ಆಗುತ್ತಿದ್ದಾರೆ. ಹೆತ್ತವರೊಂದಿಗೆ ಒಂದು ತಿಂಗಳು ತಡವಾಗಿ ನ್ಯೂ ಇಯರ್ ಸೆಲಬ್ರೇಟ್ ಮಾಡಿದ್ದ ರಾಗಿಣಿ, ನಂತರ ದೇವಸ್ಥಾನಗಳಿಗೆ ತೆರಳಿದ್ದರು. ಮಳಿಗೆಯೊಂದರ ಉದ್ಘಾಟನೆಗೂ ಹೋಗಿದ್ದ ರಾಗಿಣಿ, ಅಕ್ಕಿಪೇಟೆಯಲ್ಲಿರೋ ದರ್ಗಾಗೆ ಭೇಟಿ ಕೊಟ್ಟಿದ್ದಾರೆ.

ನಾನು ಜೀವನದಲ್ಲಿ ಪಾಸಿಟಿವ್ ಆಗಿದ್ದೇನೆ. ವಿಶ್ವಾಸದಿಂದ ಬಂದಿದ್ದನ್ನು ಎದುರಿಸುತ್ತಿದ್ದೇನೆ. ಶೀಘ್ರದಲ್ಲೇ ಸಿನಿಮಾಗಳಲ್ಲಿಯೂ ನಟಿಸುತ್ತೇನೆ. ಹಿಂದೆ ಕಮಿಟ್ ಆಗಿದ್ದ ಸಿನಿಮಾಗಳನ್ನು ಕಂಪ್ಲೀಟ್ ಮಾಡುತ್ತೇನೆ. ನಂಬಿಕೆಯೇ ಜೀವನ ಎಂದಿದ್ದಾರೆ ರಾಗಿಣಿ.