ದುನಿಯಾ ವಿಜಿ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿರುವ, ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ, ಹಲವು ವಿಶಿಷ್ಟ ಹೆಜ್ಜೆಗಳನ್ನಿಡುತ್ತಿದೆ. ಮಲೇಷ್ಯಾ ರ್ಯಾಪರ್ ಯೋಗಿಯಿಂದ ಒಂದು ಹಾಡು ಹಾಡಿಸಿದ್ದ ವಿಜಿ, ಈಗ ಇನ್ನೊಂದು ಹಾಡನ್ನು ಗಿರಿಜಾ ಪರಶುರಾಮ್ ಸಿದ್ದಿ ಮತ್ತು ಗೀತಾ ಸಿದ್ದಿಯವರಿಂದ ಹಾಡಿಸಿದ್ದಾರೆ.
ಸಿದ್ದಿ ಜನಾಂಗ, ಕರ್ನಾಟಕದ ಬುಡಕಟ್ಟು ಜನಾಂಗದಲ್ಲಿ ಒಂದು. ಆದರೆ ಮುಖ್ಯ ವಾಹಿನಿಯಲ್ಲಿ ಇವರಿಗೆ ಅವಕಾಶಗಳು ಇಲ್ಲವೇ ಇಲ್ಲ ಎನ್ನಬೇಕು. ಅಂತಹ ಸಮುದಾಯದ ಪ್ರತಿಭೆಗಳಿಗೆ ತಮ್ಮ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ ವಿಜಿ.
ಚರಣ್‍ರಾಜ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಡು, ಚಿತ್ರದ ಸನ್ನಿವೇಶಕ್ಕೆ ಪೂರಕವಾಗಿದೆ. ಅವರ ಧ್ವನಿ ಈ ಹಾಡಿಗೆ ಅದ್ಭುತವಾಗಿ ಹೊಂದಿಕೊಂಡಿದೆ ಎಂದಿದ್ದಾರೆ ಚರಣ್‍ರಾಜ್. ಏಪ್ರಿಲ್ 15ರಂದು ಸಿನಿಮಾ ರಿಲೀಸ್ ಆಗುತ್ತಿದೆ.