ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ, ಈಗಾಗಲೇ ಸಿಂಪಲ್ ಸುನಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಗಣೇಶ್ ನಟಿಸುತ್ತಿರುವ ತ್ರಿಬಲ್ ರೈಡಿಂಗ್‍ನಲ್ಲಿ, ಮೇಘಾ ಶೆಟ್ಟಿ ಹೀರೋಯಿನ್. ಕಿರುತೆರೆ ಮತ್ತು ಹಿರಿತೆರೆ ಎರಡರ ನಡುವೆ ಆಲ್ಬಂ ಸಾಂಗ್`ಗೂ ಎಂಟ್ರಿ ಕೊಟ್ಟಿದ್ದಾರೆ ಮೇಘಾ ಶೆಟ್ಟಿ.
ಮೂರೇ ಮೂರು ಪೆಗ್ಗಿನಿಂದ ಶುರು ಮಾಡಿ ಈಗ ಖರಾಬು ಸಾಂಗ್ ಮೂಲಕ ಯಶಸ್ಸಿನ ಉತ್ತುಂಗದಲ್ಲಿರೋ ಚಂದನ್ ಶೆಟ್ಟಿ ಜೊತೆ ಆಲ್ಬಂ ಸಾಂಗ್‍ಗೆ ಹೆಜ್ಜೆ ಹಾಕುತ್ತಿದ್ದಾರೆ ಮೇಘಾ. ಚಂದನ್ ಶೆಟ್ಟಿ ಸ್ವತಃ ರಚಿಸಿ, ಮ್ಯೂಸಿಕ್ ಕಂಪೋಸ್ ಮಾಡಿರುವ ನೋಡು ಶಿವ.. ಹಾಡಿನಲ್ಲಿ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ.