ಪುನೀತ್ ರಾಜ್ಕುಮಾರ್, ದೈವ ಭಕ್ತನಾಗಿ ಸಿನಿಮಾ ರಂಗಕ್ಕೆ ಬಂದವರು. ಭಕ್ತ ಪ್ರಹ್ಲಾದನಾಗಿ ನರಸಿಂಹನನ್ನೇ ಭೂಮಿಗೆ ಕರೆದು ತಂದಿದ್ದ ಪುನೀತ್, ಈಗ ಸ್ವತಃ ದೇವರಾಗುತ್ತಿದ್ದಾರೆ. ಪುನೀತ್ವರಾಗುತ್ತಿರುವುದು ಡಾರ್ಲಿಂಗ್ ಕೃಷ್ಣ ಪಾಲಿಗೆ.
ಡಾರ್ಲಿಂಗ್ ಕೃಷ್ಣ ಈಗ ಓ ಕಡವುಳೇ ಚಿತ್ರದ ರೀಮೇಕ್ನಲ್ಲಿ ನಟಿಸುತ್ತಿದ್ದಾರೆ. ಮನಸೆಲ್ಲ ನೀನೆ, ಚಿತ್ರ ಚಿತ್ರಗಳಲ್ಲಿ ನಟಿಸಿದ್ದ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್, ಈ ಚಿತ್ರಕ್ಕೆ ನಿರ್ದೇಶಕ.
ಓಕಡವುಳೇ ಚಿತ್ರದಲ್ಲಿ ವಿಜಯ್ ಸೇತುಪತಿ, ಆ ದೇವರ ಪಾತ್ರ ಮಾಡಿದ್ದರು. ಕನ್ನಡದಲ್ಲಿ ಆ ಪಾತ್ರ ಮಾಡೋಕೆ ಪುನೀತ್ ಒಪ್ಪಿಕೊಂಡಿದ್ದಾರೆ. ಏಪ್ರಿಲ್ನಲ್ಲಿ ಸಿನಿಮಾ ಕೆಲಸ ಶುರುವಾಗಲಿದೆ