Print 
master,

User Rating: 0 / 5

Star inactiveStar inactiveStar inactiveStar inactiveStar inactive
 
ತಮಿಳಿನ ಮಾಸ್ಟರ್ ಬಾಕ್ಸಾಫೀಸ್ ಕೊಟ್ಟ ಥ್ರಿಲ್ಲಿಂಗ್ ಸಂದೇಶ
Master Movie Image

ಕೊರೊನಾ ಈಗಿನ್ನೂ ಹೋಗ್ತಾ ಇದೆ. ಜನರಿಗಿನ್ನೂ ಭಯ ಹೋಗಿಲ್ಲ. ಥಿಯೇಟರುಗಳಲ್ಲಿ ಬೇರೆ 50% ಪ್ರೇಕ್ಷಕರಿಗೆ ಅಷ್ಟೇ ಅವಕಾಶ ಇದೆ. ಇಂಥಾ ಟೈಮಲ್ಲಿ ಸಿನಿಮಾ ರಿಲೀಸ್ ಮಾಡಿದ್ರೆ.. ಜನ ಬರ್ತಾರಾ..? ಬಾಕ್ಸಾಫೀಸ್‍ನಲ್ಲಿ ಲಾಭ ಸಿಗುತ್ತಾ..? ನಿರ್ಮಾಪಕರು ಸೇಫ್ ಆಗ್ತಾರಾ..? ಹೀಗೆ ಹತ್ತು ಹಲವು ಆತಂಕಗಳು.

ಇದೆಲ್ಲದರ ನಡುವೆ ರಿಲೀಸ್ ಆದ ಸಿನಿಮಾ ತಮಿಳಿನ ಮಾಸ್ಟರ್. ತಮಿಳಿನಲ್ಲಷ್ಟೇ ಅಲ್ಲ, ಇಂಡಿಯನ್ ಫಿಲಂ ಇಂಡಸ್ಟ್ರಿಯಲ್ಲಿ ಕೊರೊನಾ ಲಾಕ್ ಮಧ್ಯೆ ರಿಲೀಸ್ ಆದ ಮೊಟ್ಟ ಮೊದಲ ಸಿನಿಮಾ ದಳಪತಿ ವಿಜಯ್ ಅಭಿನಯದ ಮಾಸ್ಟರ್.

ಆ ಸಿನಿಮಾ ರಿಲೀಸ್ ಆದ 8 ದಿನಗಳಲ್ಲಿ 200 ಕೋಟಿ ದುಡಿದಿದೆ. ಮಾಸ್ಟರ್ ಜನವರಿ 13ರಂದು ರಿಲೀಸ್ ಆಗಿತ್ತು. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳೇ ಹೆಚ್ಚಾಗಿ ಕೇಳಿ ಬಂದಿತ್ತು. ಆದರೆ.. ಇದೆಲ್ಲವನ್ನೂ ಮೀರಿ ಜನ ಮೆಚ್ಚುಗೆ ಗಳಿಸಿರೋ ಮಾಸ್ಟರ್, ರಿಲೀಸ್ ಮಾಡೋಕೆ ಹಿಂದೆಮಂದೆ ಯೋಚಿಸುತ್ತಿರುವವರಿಗೆ ಧೈರ್ಯ ಕೊಟ್ಟಿದೆ.